

ಕಾನಹೊಸಹಳ್ಳಿ: ವೈದ್ಯಕೀಯ ವಿಜ್ಞಾನ ಸಂಶೋಧನೆಯಿಂದ ಈವರೆಗೆ ಕೃತಕವಾಗಿ ರಕ್ತ ಸೃಷ್ಟಿ ಅಸಾಧ್ಯವಾಗಿದೆ. ಹೀಗಾಗಿ ಒಬ್ಬರ ಜೀವ ಉಳಿಸಲು ಮತ್ತೊಬ್ಬ ವ್ಯಕ್ತಿ ರಕ್ತದಾನ ಮಾಡಲೇಬೇಕು. ಆದರೆ, ರಕ್ತದಾನ ಮಾಡಿದರೆ ಮತ್ತೆ ರಕ್ತ ಉತ್ಪನ್ನವಾಗುವುದಿಲ್ಲವೆಂಬ ತಪ್ಪು ಕಲ್ಪನೆ ಬೇಡವೆಂದು ಗುಡೇಕೋಟೆ ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ಹೇಳಿದರು.
ಗುಡೇಕೋಟೆಯಲ್ಲಿ ಆರೋಗ್ಯ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಆರೋಹಣ ಸೊಸೈಟಿ ಫಾರ್ ಸೋಷಿಯಲ್ ಡೆವಲಪ್‌ಮೆಂಟ್ ಸಂಸ್ಥೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವಂತ ಮನುಷ್ಯ ರಕ್ತದಾನ ಮಾಡುವುದರಿಂದ ಕೊರತೆ ಉಂಟಾಗುವುದಿಲ್ಲ ಎಂಬ ಅರಿವು ಪ್ರತಿಯೊಬ್ಬರಲ್ಲಿ ಬರಬೇಕು. ಗಾಯಗೊಂಡವರು ಮತ್ತು ಗರ್ಭಿಣಿಯರಿಗೆ ರಕ್ತದ ಅವಶ್ಯ ಇದ್ದಾಗ ತಡಮಾಡದೆ ರಕ್ತದಾನ ಮಾಡುವಂತೆ ಜನರಿಗೆ ಸಲಹೆ ನೀಡಿದರು.
ಗ್ರಾಪಂ ಸದಸ್ಯೆ ಸುನೀತಾ ತಿಪ್ಪೇಸ್ವಾಮಿ, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಶ್ರೀಧರ್, ಡ್ಯಾಪ್ಕ್ ಜಿಲ್ಲಾ ಮೇಲ್ವಿಚಾರಕ ಬಿ.ಗಿರೀಶ್, ಸಿಬ್ಬಂದಿ ಮಂಜುಳಾ, ಬಿ.ಎಸ್.ವಹಾಬ್, ನಿರಂಜನ್, ಮೂರ್ತಿ, ಕಟ್ಟೆ ಬಸಪ್ಪ, ಶಿವಪ್ರಸಾದ್, ಶೀಲಾ, ಸ್ವಪ್ನಾ, ಹೇಮಂತ, ಶ್ರುತಿ, ಬೋರಣ್ಣ ಇದ್ದರು.