ಉತ್ತಮ ಹವ್ಯಾಸಗಳ ಮೈಗೂಡಿಸಿಕೊಳ್ಳಿ

Kh halli Drugs Day
ಕಾನಹೊಸಹಳ್ಳಿಯಲ್ಲಿ ಪೊಲೀಸ್ ಇಲಾಖೆಯಿಂದ ಮಾದಕದ್ರವ್ಯ ವಿರೋಧಿ ದಿನ ಆಚರಿಸಲಾಯಿತು. ಎಎಸ್‌ಐ ಎಸ್.ಕೆ.ಜಿಲಾನ್, ಜಾತಪ್ಪ, ಪ್ರಕಾಶ, ಧ್ರುವಕುಮಾರ್, ಗುರುಪ್ರಸಾದ್ ಇತರರಿದ್ದರು.
Published on

ಕಾನಹೊಸಹಳ್ಳಿ: ಮಾದಕ ದ್ರವ್ಯಗಳ ಸೇವನೆ ಜೀವಕ್ಕೆ ಮಾರಕವಾಗಲಿದೆ ಎಂದು ಎಎಸ್‌ಐ ಎಸ್.ಕೆ.ಜಿಲಾನ್ ಹೇಳಿದರು.

ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವ ಸಮೂಹ ದೇಶದ ಆಸ್ತಿಯಾಗಿದ್ದು, ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳದೆ ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು. ಯುವಶಕ್ತಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.

ಮುಖ್ಯಶಿಕ್ಷಕ ಎಚ್.ಜಿ.ಪ್ರಕಾಶ್‌ಗೌಡ ಮಾತನಾಡಿ, ಪಾಲಕರು ಕಷ್ಟ ಪಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಅವರನ್ನು ಸಂತೋಷಪಡಿಸಲು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ತಿಳಿಸಿದರು.

ಪೇದೆ ಸಂದೀಪ್ ಕುಮಾರ್ ಮಾತನಾಡಿದರು. ಪ್ರಮುಖರಾದ ಜಿ.ಜಿ.ಜಾತಪ್ಪ, ಧ್ರುವಕುಮಾರ್, ಗುರುಪ್ರಸಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net