ಗೊಲ್ಲರಹಟ್ಟಿಗಳ ಅಭಿವೃದ್ಧಿಗೆ ಆದ್ಯತೆ

Khhalli Mla
ಕಾನಹೊಸಹಳ್ಳಿ ಸಮೀಪದ ನೆಲಬೊಮ್ಮನಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು. ಪ್ರಮುಖರಾದ ದ್ಯಾಮಣ್ಣ, ಸಣ್ಣ ವೀರಣ್ಣ, ಕಾಕಿಬಸಣ್ಣ, ಪಿಡಿಒ ಕೆಂಚಪ್ಪ, ಎಇಇ ನಾಗನಗೌಡ ಇತರರಿದ್ದರು.
Published on

ಕಾನಹೊಸಹಳ್ಳಿ: ತಾಲೂಕಿನ ಗೊಲ್ಲರಹಟ್ಟಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಡಾ ಎನ್.ಟಿ.ಶ್ರೀನಿವಾಸ್ ಹೇಳಿದರು.

ಹಿರೇಕುಂಬಳಗುಂಟೆ ಗೊಲ್ಲರಹಟ್ಟಿಯಲ್ಲಿ ಸರ್ಕಾರಿ ಕಿಪ್ರಾ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದ ಗೊಲ್ಲರಹಟ್ಟಿ, ಮ್ಯಾಸರಹಟ್ಟಿ, ವಡ್ಡರಹಟ್ಟಿ, ಉಪ್ಪಾರಹಟ್ಟಿ, ತಾಂಡಾಗಳ ಸೊಬಗು - ಸಾಮರಸ್ಯದ ಬದುಕು ಹೆಮ್ಮೆ ಅನಿಸುತ್ತದೆ. ಆದರೆ, ಅದರ ಹಿಂದಿನ ಹಸಿವು ಮತ್ತು ಬಡತನದ ಚಿತ್ರಣ ನೋಡಿದರೆ ಬೇಸರವಾಗುತ್ತದೆ. ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ಗಂಗಮ್ಮ ಕರಿಬಸಪ್ಪ, ಮುಖಂಡರಾದ ಜಿ.ಪಿ.ಗುರುಲಿಂಗಪ್ಪ, ಜಿ.ಒಬಣ್ಣ, ಬಾಲರಾಜು, ದೊಡ್ಡಪ್ಪ, ಸಿಆರ್‌ಪಿ ಲೋಕೇಶ್, ಮುಖ್ಯಶಿಕ್ಷಕಿ ಪರಿದಾ ಬೇಗಂ, ಶಿಕ್ಷಕ ಕುಬೇರಪ್ಪ, ಪಿಡಬ್ಲುೃಡಿ ಎಇಇ ನಾಗನಗೌಡ, ಗ್ರಾಪಂ ಪಿಡಿಒ ನಿಂಗಪ್ಪ, ಚಿನ್ನಾಪ್ರಿ, ಸದಸ್ಯರಾದ ಮಲಿಯಪ್ಪ, ದುರುಗಪ್ಪ ಇತರರಿದ್ದರು.

ಇದಕ್ಕೂ ಮುನ್ನ ನೆಲಬೊಮ್ಮನಹಳ್ಳಿ ಗೊಲ್ಲರಹಟ್ಟಿ, ಕಲ್ಲಹಳ್ಳಿ ಗೊಲ್ಲರಹಟ್ಟಿ, ಬಡೇಲಡಕು, ದೊಡ್ಡ ಗೊಲ್ಲರಹಟ್ಟಿ, ಲೋಕಿಕೆರೆಯಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net