

ಕಾನಹೊಸಹಳ್ಳಿ: ಗಣೇಶ ಚತುರ್ಥಿ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಣೆ ಮಾಡಬೇಕು. ಶಾಂತಿಗೆ ಭಂಗ ತರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸೈ ಸಿದ್ದರಾಮ ಬಿದರಾಣಿ ಎಚ್ಚರಿಕೆ ನೀಡಿದರು.
ಸಮೀಪದ ಕಾನಾಮಡುಗು ದಾಸೋಹ ಮಠದ ಆವರಣದಲ್ಲಿ ಮಂಗಳವಾರ ಗಣೇಶ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು.
ಕಾನೂನು ಉಲ್ಲಂಘನೆ ಅಥವಾ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅವಶ್ಯಕತೆ ಬಂದರೆ ರೌಡಿಶೀಟರ್ ಕೂಡ ತೆರೆಯಲಾಗುವುದು. ಸುಪ್ರೀಂ ಕೋರ್ಟ್ ಆದೇಶದಂತೆ ಧ್ವನಿ ವರ್ಧಕ ಬಳಸಿ, ನಿಗದಿತ ಸಮಯಕ್ಕೆ ಗಣಪತಿ ವಿಸರ್ಜನೆ ಮಾಡಬೇಕು. ಗಣಪತಿ ಪ್ರತಿಷ್ಠಾಪಿಸಲು ಪರವಾನಗಿ ಕಡ್ಡಾಯ ಎಂದರು.
ಕಾನಾಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ. ಐಮಡಿ ಶರಣಾರ್ಯರು, ಪ್ರಮುಖರಾದ ಕೃಷ್ಣಪ್ಪ, ಮಂಜುನಾಥ, ಸಿದ್ದಲಿಂಗಪ್ಪ, ದಿನೇಶ್, ಬಾಲಪ್ಪ, ಬೋರಪ್ಪ, ಅಂಜಿನಪ್ಪ, ದುರುಗಪ್ಪ, ಶರಣಪ್ಪ, ಪಕ್ಕೀರಪ್ಪ, ಸುರೇಶ್, ಕುಂಬಾರ್ ಶಿವಣ್ಣ, ಕೆಂಚಪ್ಪ, ಪ್ರಕಾಶ, ಹುಲಿಕೆರೆ ಪಾಂಡು ಇತರರಿದ್ದರು.