ತೋಟಗಾರಿಕೆಗೆ ಮರಿಗೌಡರ ಕೊಡುಗೆ ಅಪಾರ

khhalli Agri
ಚಿಕ್ಕಜೋಗಿಹಳ್ಳಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಗುರುವಾರ ತೋಟಗಾರಿಕೆ ಪಿತಾಮಹ ಡಾ.ಮರಿಗೌಡರ ಜನ್ಮದಿನ ಆಚರಿಸಲಾಯಿತು. ಹಿರಿಯ ತೋಟಗಾರಿಕೆ ನಿರ್ದೇಶಕ ತೋಟಯ್ಯ, ಸಹಾಯಕ ನಿರ್ದೇಶಕ ವಿಜಯ ನಿಚ್ಚಾಪುರ, ಸಿಬ್ಬಂದಿ ನಂದಿನಿ, ಕಾವೇರಿ, ಸಮೀವುಲ್ಲಾ, ಶಿವಕುಮಾರ ಇತರರಿದ್ದರು.
Published on

ಕಾನಹೊಸಹಳ್ಳಿ: ದೇಶದ ತೋಟಗಾರಿಕಾ ಕ್ಷೇತ್ರದಲ್ಲಿ ವಿನೂತನ ಮತ್ತು ವೈಜ್ಞಾನಿಕ ಪ್ರಯೋಗದ ಮೂಲಕ ಆಮೂಲಾಗ್ರ ಬದಲಾವಣೆ ತಂದವರು ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರಿಗೌಡರು ಎಂದು ತೋಟಗಾರಿಕೆ ಇಲಾಖೆ ಎಡಿ ವಿಜಯ ನಿಚ್ಚಾಪುರ ಹೇಳಿದರು.

ಚಿಕ್ಕಜೋಗಿಹಳ್ಳಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಗುರುವಾರ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್ ಮರಿಗೌಡರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ.ಮರಿಗೌಡರು ತೋಟಗಾರಿಕಾ ಇಲಾಖೆ ಹಾಗೂ ನರ್ಸರಿ ಸ್ಥಾಪನೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಬೆಂಗಳೂರಿನ ಲಾಲ್‌ಬಾಗ್ ಸಸ್ಯತೋಟ ಸೇರಿ ತೋಟಗಾರಿಕೆಗೆ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ರಾಜ್ಯದವರಾದ ಮರಿಗೌಡರ ತತ್ವಾದರ್ಶ ಮತ್ತು ಚಿಂತನೆಗಳು ಇಂದಿನ ವಿದ್ಯಾರ್ಥಿಗಳು ಪಾಲಿಸಬೇಕು ಎಂದರು.

ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ತೋಟಯ್ಯ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಅಪೌಷ್ಟಿಕದಿಂದ ಬಳಲುತ್ತಿದ್ದ ಜನರಿಗೆ ತೋಟಗಾರಿಕೆ ನರ್ಸರಿಯಲ್ಲಿ ಬೆಳೆದ ಹಣ್ಣುಗಳು ಮತ್ತು ಹಣ್ಣಿನ ಗಿಡಗಳನ್ನು ಉಚಿತವಾಗಿ ವಿತರಿಸಿದವರು ಮರಿಗೌಡರು ಎಂದರು.

ಇಲಾಖೆ ಸಿಬ್ಬಂದಿ ನಂದಿನಿ, ಕಾವೇರಿ, ಸಮೀವುಲ್ಲಾ, ಸೈಯದ್ ಬಾಷಾ, ಶಿವಕುಮಾರ್, ಮೌನೇಶ್, ಗುರುಮೂರ್ತಿ, ಬಸವೇಶ್, ಶಿವಜ್ಜ, ರವಿಕುಮಾರ್, ಪ್ರಗತಿಪರ ಕೃಷಿಕ ಪೂಜಾರಹಳ್ಳಿ ತಿಪ್ಪೇಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net