ಹಳ್ಳದಲ್ಲಿ ಮುಳುಗಿ ಬಾಲಕ ಸಾವು

Kanahosahalli Boy Death
ಚಿಕ್ಕಜೋಗಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗನ ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದ ತಾಯಿ ಪುಷ್ಪಾವತಿ ಮತ್ತು ಕುಟುಂಬದವರನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೇಟಿಯಾಗಿ ಸಾಂತ್ವನ ಹೇಳಿದರು. (ಸಾಗರ್)
Published on

ಕಾನಹೊಸಹಳ್ಳಿ: ಬಣವಿಕಲ್ಲು ಗ್ರಾಮ ಹೊರವಲಯದ ಉಪ್ಪುಹಳ್ಳದಲ್ಲಿ ಶನಿವಾರ ಬಾಲಕ ಮುಳುಗಿ ಮೃತಪಟ್ಟಿದ್ದಾನೆ.

ಗ್ರಾಮದ 5ನೇ ತರಗತಿ ವಿದ್ಯಾರ್ಥಿ ಸಾಗರ್ (12) ಮೃತ. ಆಟವಾಡಲು ತೆರಳುವುದಾಗಿ ತಾಯಿಗೆ ಹೇಳಿ ಸಂಜೆ ಹೋದ ಮಗ ರಾತ್ರಿಯಾದರೂ ಮನೆಗೆ ಬಂದಿಲ್ಲ. ಗಾಬರಿಗೊಂಡ ತಾಯಿ ಪುಷ್ಪಾವತಿ, ಮಗನ ಸ್ನೇಹಿತರನ್ನು ಕೇಳಿದ್ದಾರೆ. ಹಳ್ಳದ ಕಡೆ ಹೋಗಿ ಪರಿಶೀಲಿಸಿದಾಗ ದಂಡೆಯ ಮೇಲಿರುವ ಮಗನ ಬಟ್ಟೆಗಳನ್ನು ಗುರುತಿಸಿದ್ದಾರೆ.

ಕಾನಹೊಸಹಳ್ಳಿ ಠಾಣೆಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ, ಹಳ್ಳದಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ದೊರೆತಿದೆ. ಕಾನಹೊಸಹಳ್ಳಿ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ಶಾಸಕ ಭೇಟಿ, ಸಾಂತ್ವನ: ಮಗನ ಮರಣೋತ್ತರ ಪರೀಕ್ಷೆಗೆಂದು ಚಿಕ್ಕಜೋಗಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾಯುತ್ತಿದ್ದ ಪುಷ್ಪಾವತಿ ಮತ್ತು ಕುಟುಂಬದವರನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭಾನುವಾರ ಭೇಟಿಯಾಗಿ ಸಾಂತ್ವನ ಹೇಳಿದರು.

ಸ್ಥಳದಲ್ಲೇ ಕೂಡ್ಲಿಗಿ ತಹಸೀಲ್ದಾರ್ ಮತ್ತು ವಿಜಯನಗರ ಡಿಡಿಪಿಐಗೆ ಕರೆ ಮಾಡಿ, ವಿದ್ಯಾರ್ಥಿ ಸಾಗರ್ ಕುಟುಂಬಕ್ಕೆ ವಿದ್ಯಾರ್ಥಿ ಕಲ್ಯಾಣ ನಿಧಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿ ಮೂಲಕ ಪರಿಹಾರ ಕಲ್ಪಿಸಿಕೊಡಬೇಕೆಂದು ಸೂಚನೆ ನೀಡಿದರು. ಅಲ್ಲದೆ, ಬಾಲಕನ ತಾಯಿಗೆ ವೈಯಕ್ತಿಕವಾಗಿ ಧನ ಸಹಾಯ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net