ಡಾ.ವಿಷ್ಣುವರ್ಧನ್ ಜೀವನ ಮಾದರಿ

khhalli exmla
ಚಿಕ್ಕಜೋಗಿಹಳ್ಳಿಯಲ್ಲಿ ನಟ ವಿಷ್ಣುವರ್ಧನ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಳ್ಳಕೆರೆ ನಗರಸಭೆ ಸದಸ್ಯ ಪ್ರಸನ್ನಕುಮಾರ್ ಮಾತನಾಡಿದರು. ಮಾಜಿ ಶಾಸಕ ಕೆ.ವಿ.ರವೀಂದ್ರನಾಥಬಾಬು, ಜಿ.ಪಿ.ಗುರುಲಿಂಗಪ್ಪ, ಗಡ್ಡೇರ್ ರವಿಕುಮಾರ್, ಜಿ.ಓಬಣ್ಣ ಇದ್ದರು.
Published on

ಕಾನಹೊಸಹಳ್ಳಿ: ನಟನೆಯೊಂದಿಗೆ ಸಾಮಾಜಿಕ ಕಾರ್ಯದಲ್ಲಿ ತೊಡಗುವ ಮೂಲಕ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರು ಆದರ್ಶವಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ವಿ.ರವೀಂದ್ರಬಾಬು ಹೇಳಿದರು.

ನಟ ವಿಷ್ಣುವರ್ಧನ್ ಅವರ ಜನ್ಮದಿನದ ಅಂಗವಾಗಿ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ವಿಷ್ಣುಸೇನಾ ಸಮಿತಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಭಿಮಾನಿ ಬಳಗ ರಸ ಮಂಜರಿ ಕಾರ್ಯಕ್ರಮದ ಜತೆಗೆ ರೈತರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕೆಲಸ ಮಾಡಬೇಕು. ವಿಷ್ಣುವರ್ಧನ್ ಸಿನಿಮಾದಲ್ಲಿ ಉತ್ತಮ ಪಾತ್ರಗಳನ್ನು ನಿರ್ವಹಣೆ ಜತೆಗೆ ನಿಜ ಜೀವನದಲ್ಲಿಯೂ ಮಾದರಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಚಳ್ಳಕೆರೆ ನಗರಸಭೆ ಸದಸ್ಯ ಪ್ರಸನ್ನಕುಮಾರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಾಜೇಶನಾಯ್ಕ, ರೈತ ಮುಖಂಡ ಜಿ.ಪಿ.ಗುರುಲಿಂಗಪ್ಪ, ವಿಷ್ಣುಸೇನಾ ಸಮಿತಿ ತಾಲೂಕು ಅಧ್ಯಕ್ಷ ಜಿ.ಓಬಣ್ಣ, ಮಹಮದ್ ಸಾದಿಕ್, ರಾಜವಿಷ್ಣು , ಸರಿತ್ ಖಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net