ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ

Untitled design (17)
Published on

ಕಾನಹೊಸಹಳ್ಳಿ: ಡಾ.ಅಂಬೇಡ್ಕರ್ ಅವರು ಎಲ್ಲ ಸಮುದಾಯದವರಿಗೆ ಹಕ್ಕು ಮತ್ತು ಕರ್ತವ್ಯಗಳನ್ನು ಕಲ್ಪಿಸಿ ಪ್ರತಿಯೊಬ್ಬ ಪ್ರಜೆಯ ಹಿತ ಬಯಸಿದ್ದಾರೆ ಎಂದು ವಕೀಲ ಮರ್ಲಹಳ್ಳಿ ಪರಮೇಶ್ ಹೇಳಿದರು.

ಹುಡೇಂ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲರಿಗೂ ಶಿಕ್ಷಣ, ಮತದಾನದಂಥ ಸಾಕಷ್ಟು ಹಕ್ಕುಗಳನ್ನು ಕಲ್ಪಿಸಿದ್ದು, ಮಹಿಳೆಯರಿಗೂ ಆದ್ಯತೆ ನೀಡಲಾಗಿದೆ. ಕಾರ್ಮಿಕ ಕಾನೂನಿನ ಮೂಲಕ ದಿನಕ್ಕೆ 8 ಗಂಟೆ ಕೆಲಸದ ಸಮಯ ನಿಗದಿ ಮಾಡಿರುವುದಕ್ಕೆ ಸಂವಿಧಾನವೇ ಕಾರಣ. ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಲು ಪಾಲಕರು ಮುಂದಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಘಟನೆಯ ಜಿಲ್ಲಾ ಸಂಚಾಲಕ ಎಸ್.ದುರುಗೇಶ್ ಮಾತನಾಡಿ, ಪರಿಶಿಷ್ಟ ಜಾತಿಯ ಒಳಮೀಸಲು ಕಲ್ಪಿಸುವ ಸಂಬಂಧ ಸರ್ಕಾರವು ಸಮೀಕ್ಷೆ ಕೈಗೊಂಡಿದೆ. ಸಮೀಕ್ಷೆ ವೇಳೆ ಉಪಜಾತಿ ಕಾಲಂನಲ್ಲಿ ಮಾದಿಗ ಎಂದು ನಮೂದಿಸಬೇಕು ಎಂದರು.

ವಕೀಲ ಮರ್ಲಹಳ್ಳಿ ಪರಮೇಶ್, ಆಸ್ಪತ್ರೆಯ ಭೂ ದಾನಿ ಕೆ.ರಾಜಶೇಖರಪ್ಪ, ಪತ್ರಕರ್ತ ಹುಡೇಂ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಂಘಟನಾ ಸಂಚಾಲಕ ಬಿ.ಟಿ.ಗುದ್ದಿ ದುರುಗೇಶ್, ತಾಲೂಕು ಸಂಚಾಲಕ ಟಿ.ಗಂಗಾಧರ, ಕೂಡ್ಲಿಗಿ ಮಹೇಶ್, ಎಎಸ್‌ಐ ಎಸ್.ಕೆ.ಜಿಲಾನ್, ಕೆ.ರಾಜಶೇಖರಪ್ಪ, ಬಿ.ಎಸ್.ಪಾಪಣ್ಣ, ಗ್ರಂಥಾಲಯ ಮೇಲ್ವಿಚಾರಕ ತುಡುಮ ಗುರುರಾಜ್, ಮಲ್ಲೂರಹಳ್ಳಿ ರಮೇಶ್ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಪೂಲಯ್ಯ, ಬೋಸೆಮಲ್ಲಯ್ಯ, ಕಾನಮಡುಗು ದುರುಗಪ್ಪ, ಫಕೀರಪ್ಪ, ನಡುವಲಮನೆ ತಿಪ್ಪೇಸ್ವಾಮಿ, ಸುರೇಶ್, ಚಿನ್ನೋಬಯ್ಯ, ನಾಗೇಶ್, ದಕ್ಷಿಣಮೂರ್ತಿ, ಮೂಗಪ್ಪ, ಅಜಯ್, ಬೋರಯ್ಯ, ಮಂಗಳಮುಖಿ ಕಾವ್ಯಾ ಇದ್ದರು.

ಭಾವಚಿತ್ರ ಮೆರವಣಿಗೆ: ದುರುಗಮ್ಮ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು. ಡಿ.ಜೆ ಹಾಡಿಗೆ ಯುವಕರು, ಮಹಿಳೆಯರು ಕುಣಿದು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net