

ಕಾನಹೊಸಹಳ್ಳಿ: ಇಲ್ಲಿನ ಪಿಎಚ್‌ಸಿ ವೈದ್ಯಾಧಿಕಾರಿ ಡಾ.ವಿಶ್ವನಾಥ ನಡೆ ಖಂಡಿಸಿ ಆಶಾ ಕಾರ್ಯಕರ್ತೆಯರು ಸೋಮವಾರ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹೆರಿಗೆಗಾಗಿ ಗರ್ಭಿಣಿಯರನ್ನು ಆಶಾ ಕಾರ್ಯಕರ್ತೆಯರು ಆಸ್ಪತ್ರೆಗೆ ಕರೆತಂದಾಗ ಡಾ.ವಿಶ್ವನಾಥ ತಕ್ಷಣ ಸ್ಪಂದಿಸಲ್ಲ. ಸೂಕ್ತ ಚಿಕಿತ್ಸೆ ನೀಡಲ್ಲ.ನಾವು ಏನೇ ಹೇಳಿದರೂ ನಿರ್ಲಕ್ಷೃ ತೋರುತ್ತಾರೆ. ಅಲ್ಲದೆ ಸರಿಯಾಗಿ ನಡೆದುಕೊಳ್ಳಲ್ಲ. ಇಂಥ ಧೋರಣೆಯ ವೈದ್ಯರನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ವಿಷಯ ತಿಳಿಯುತ್ತಿದ್ದಂತೆ ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್ ಕುಮಾರ್ ಆಗಮಿಸಿ, ಆಶಾ ಕಾರ್ಯಕರ್ತೆಯರ ಸಮಸ್ಯೆ ಆಲಿಸಿದರು. ಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಅಡವಿ ನಾಗರಾಜ, ಲಕ್ಷ್ಮೀದೇವಿ, ಪಿತಾಂಬರ, ಶಿವರಾಜ ಮಾತನಾಡಿ, ರೋಗಿಗಳಿಗೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೆ ತಾತ್ಸಾರ ತೋರುತ್ತಾರೆ. ವೈದ್ಯರು ವರ್ತನೆ ಸರಿಪಡಿಸಿಕೊಳ್ಳದಿದ್ದರೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು. ಬಳಿಕ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.
ಗ್ರಾಪಂ ಸದಸ್ಯ ಎಚ್.ರಮೇಶ್, ಮುಖಂಡರಾದ ಸೂರ್ಯಪ್ರಕಾಶ, ಕಿಟ್ಟಪ್ಪರ ವೀರೇಶ್, ಮನೋಜ್ ಕುಮಾರ್, ರೇವಣ್ಣ, ಅಶೋಕ್, ಸಿ.ಬಿ.ನಾಗೇಶ್, ಪ್ರಭು, ಸಿದ್ದನಗೌಡ, ಆಶಾ ಕಾರ್ಯಕರ್ತೆಯರು ಹಾಗೂ ಎಎಸ್‌ಐ ಗೋವಿಂದಪ್ಪ, ಪೇದೆಗಳಾದ ಜಗದೀಶ್, ರವಿಗೌಡ, ಹಾಲೇಶ್ ಇದ್ದರು.