ಶಿಕ್ಷಣದಿಂದ ಪ್ರಗತಿ ಹೊಂದಲು ಸಾಧ್ಯ

khhalli dss
Published on

ಕಾನಹೊಸಹಳ್ಳಿ: ಶಿಕ್ಷಣದಿಂದ ಮಾತ್ರ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ವಿಜಯನಗರ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೊಟ್ಟೂರು ಬಿ.ಮರಿಸ್ವಾಮಿ ಹೇಳಿದರು.

ಸೂಲದಹಳ್ಳಿಯಲ್ಲಿ ದಸಂಸ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು. ಬಡತನ ಇದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಆ ಮೂಲಕ ಪ್ರಗತಿ ಹೊಂದಬೇಕು. ಗ್ರಾಮದಲ್ಲಿ ಎಲ್ಲರೂ ಸೌಹಾರ್ದದಿಂದ ಜೀವನ ನಡೆಸಬೇಕು ಎಂದರು.

ದಸಂಸ ಕೂಡ್ಲಿಗಿ ತಾಲೂಕು ಅಧ್ಯಕ್ಷ ಡಿ.ಎಚ್.ದುರುಗೇಶ್ ಮಾತನಾಡಿ, ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ಎಲ್ಲರೂ ಸಂಘಟಿತರಾಗಬೇಕು. ಡಾ.ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಪ್ರಗತಿ ಹೊಂದಬೇಕು ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಸಿದ್ದಪ್ಪ, ಪ್ರಮುಖರಾದ ಬಂಡೆ ರಾಘವೇಂದ್ರ, ಕೊಟ್ಟೂರು ಎಲ್.ಕುಬೇರಪ್ಪ, ಹಿರೇಹೆಗ್ಡಾಳ್ ನಾಗರಾಜ, ಸೂಲದಹಳ್ಳಿ ವೆಂಕಟೇಶ್, ಓಬಳಶೆಟ್ಟಿಹಳ್ಳಿ ಕೊಟ್ರೇಶ್, ಕುರುಬನಹಳ್ಳಿ ರಮೇಶ್, ಹುಲಿಕುಂಟೆ ಅನಿಲ್, ಕುದುರೆಡುವು ಕುಮಾರ್, ಎಂ.ಬಿ.ಅಯ್ಯನಹಳ್ಳಿ ನಾಗರಾಜ, ಪಿಡಿಒ ಎಂ.ಎಸ್.ಹುಲಿರಾಜಪ್ಪ , ಭೀಮಜ್ಜಿರ ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net