ಮುರಿದ ವಿದ್ಯುತ್ ಕಂಬಗಳ ಬದಲಿಸಿ

Kanahossali power poll problem
ಕಾನಹೊಸಹಳ್ಳಿಯ ರೈತ ಸಂಪರ್ಕ ಕೇಂದ್ರದ ಹತ್ತಿರ ಮುರಿದ ವಿದ್ಯುತ್ ಕಂಬ.
Published on

ಕಾನಹೊಸಹಳ್ಳಿ: ಗ್ರಾಮದ ಸಂಗೋಳ್ಳಿ ರಾಯಣ್ಣ ಸರ್ಕಲ್ ಹತ್ತಿರ ರೈತ ಸಂಪರ್ಕ ಕೇಂದ್ರಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ವಿದ್ಯುತ್ ಕಂಬ ಮುರಿದಿದ್ದು, ಕಂಬ ಬದಲಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರೈತ ಸಂಪರ್ಕ ಕೇಂದ್ರಕ್ಕೆ ನಿತ್ಯ ಅನೇಕರು ಬಂದು ಹೋಗುತ್ತಾರೆ. ಆದ್ದರಿಂದ ಅಪಾಯ ಸಂಭವಿಸುವ ಮುನ್ನ ಕಂಬ ಸರಿಪಡಿಸಿ. ವಿದ್ಯುತ್ ಕಂಬದಲ್ಲಿ 11ಕೆವಿ ವೈಯರ್ ಇದ್ದು, ಕಂಬ ಮುರಿದು ಹಲವು ತಿಂಗಳು ಕಳೆದರು ಜೆಸ್ಕಾಂ ಅಧಿಕಾರಿಗಳು ದುರಸ್ತಿಗೆ ಮುಂದಾಗದೆ ನಿರ್ಲಕ್ಷೃ ವಹಿಸುತ್ತಿರುವುದು ಸರಿಯಲ್ಲ ಎಂದು ಆಗ್ರಹಿಸಿದರು.

ವಿದ್ಯುತ್ ಕಂಬ ಖಾಸಗಿ ಬಡವಾಣೆಯಲ್ಲಿದ್ದು, ಹಸ್ತಾಂತರಕ್ಕೆ ಸಮಸ್ಯೆಗಳಿವೆ. ಆದರೆ, ರೈತ ಸಂಪರ್ಕ ಕೇಂದ್ರಕ್ಕೆ ತೆರಳುವ ಸಾರ್ವಜನಿಕರ ಹಿತದೃಷ್ಠಿಯಿಂದ ಕೂಡಲೇ ದುರಸ್ತಿ ಮಾಡಲಾಗುವುದು. | ಮಾರಪ್ಪ ಜೆಸ್ಕಾಂ ಜೆಇ, ಕಾನಹೊಸಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net