ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಕ್ರಮ

Kanahossali MLA srinivas bhumipuja for school new rooms
ಕಾನಹೊಸಹಳ್ಳಿ ಸಮೀಪದ ಐಗಳಮಲ್ಲಾಪುರದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಶಾಲಾಕೊಠಡಿ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ನವೀನ್‌ಕುಮಾರ್, ಮಡಿವಾಳ ಮಾರೇಶ, ತಾಪಂ ಮಾಜಿ ಸದಸ್ಯ ಬೋರಯ್ಯ, ಪಿಡಿಒ ವಸಂತನಾಯ್ಕ ಇತರರಿದ್ದರು.
Published on

ಕಾನಹೊಸಹಳ್ಳಿ: ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅನುದಾನ ತಂದು ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಐಗಳಮಲ್ಲಾಪುರದಲ್ಲಿ ಮಂಗಳವಾರ 25 ಲಕ್ಷ ರೂ. ವೆಚ್ಚದ ಶಾಲಾಕೊಠಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕೂಡ್ಲಿಗಿ ತಾಲೂಕು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವಾಗಿದ್ದು, ಶಾಲಾ ಕೊಠಡಿಗಳ ಕೊರತೆಯಿದೆ. ಶಿಕ್ಷಕರ ಕೊರತೆ ಇರುವ ಕಡೆ ಅತಿಥಿ ಶಿಕ್ಷಕರನ್ನು ನೇಮಿಸುವ ಮೂಲಕ ತಾತ್ಕಾಲಿಕವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಪ್ರಮುಖರಾದ ಗಾಳೆಪ್ಪ, ಡಿ.ನಾಗರಾಜ, ಮಹಾದೇವಕ್ಕ, ಗಂಗಾಧರ್, ಕೂಡ್ಲಿಗಿ ವೀರಯ್ಯ, ಗ್ರಾಪಂ ಸದಸ್ಯರಾದ ಅಂಜಿನಪ್ಪ, ಬಸವರಾಜ, ಜಿ.ಓಬಳೇಶ, ಕಾರ್ಯದರ್ಶಿ ಹೇಮಣ್ಣ, ಈಡಿಗರ ಮಾರುತಿ, ಜಿ.ಮಹಾಂತೇಶ, ಸಿದ್ದಯ್ಯಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net