ವಿದ್ಯಾರ್ಥಿಗಳಿಗೆ ಪೂರಕ ಕಲಿಕಾ ಹಬ್ಬ- ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕೆ.ಸಿ.ಪ್ರಕಾಶ್ ಅನಿಸಿಕೆ

KHH-1P
ಎ.ದಿಬ್ಬದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ಕಲಿಕಾ ಹಬ್ಬವನ್ನು ಸಂಪನ್ಮೂಲ ವ್ಯಕ್ತಿ ಕೆ.ಸಿ.ಪ್ರಕಾಶ ಉದ್ಘಾಟಿಸಿದರು. ಗ್ರಾಪಂ ಸದಸ್ಯ ಸಿದ್ದೇಶ್ವರ, ಶೇಖರಯ್ಯ, ಶಿಕ್ಷಕರಾದ ಮಂಗಳಮ್ಮ, ಶಬಾನಾ, ಗೋವಿಂದಪ್ಪ ಇತರರಿದ್ದರು.
Published on

ಕಾನಹೊಸಹಳ್ಳಿ: ಪಠ್ಯದ ಪೂರಕ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಿಸುವ ಸಲುವಾಗಿ ಕಲಿಕಾ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಚೌಡಾಪುರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕೆ.ಸಿ.ಪ್ರಕಾಶ್ ಹೇಳಿದರು.

ಎ.ದಿಬ್ಬದಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳಲ್ಲಿ ಅಕ್ಷರ, ಅಂಕಿ, ಭಾಷಾ ಜ್ಞಾನ, ಪಠ್ಯ ಆಧರಿತ ಕಲಿಕಾ ಸಾಮರ್ಥ್ಯ ವೃದ್ಧಿಯಾಗಲಿದೆ. ಸರ್ಕಾರದ ಮಹತ್ವದ ಈ ಕಾರ್ಯಕ್ರಮ ಕ್ಲಸ್ಟರ್ ಮಟ್ಟದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಎಸ್.ಪಾಂಡುರಂಗ ಮಾತನಾಡಿ, ಕಲಿಕಾ ಹಬ್ಬವನ್ನು ಶಾಲೆಯ ಅಂಗಳದಲ್ಲಿ ಆಚರಿಸುವ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಶ್ರಮಿಸಲಾಗುವುದು. ಅಲ್ಲದೆ, ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳು ಒಂದೆಡೆ ಸೇರುವುದರಿಂದ ಕಲಿಕಾಸಕ್ತಿ ಬೆಳೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ಟಿ.ಎಚ್.ಎಂ.ಶೇಖರಯ್ಯ, ಗ್ರಾಪಂ ಸದಸ್ಯ ಸಿದ್ದೇಶ್ ಮಾತನಾಡಿದರು. ಗ್ರಾಪಂ ಸದಸ್ಯರಾದ ಚಿನ್ನಪ್ಪ, ನುಂಕೇಶ್, ಎಸ್ಡಿಎಂಸಿ ಸದಸ್ಯರಾದ ಶಿವಕುಮಾರ್, ಸುರೇಶ್, ವೀರನಗೌಡ, ತುಪ್ಪಕ್ಕನಹಳ್ಳಿ ಶಾಲೆ ಮುಖ್ಯಶಿಕ್ಷಕ ಗೋವಿಂದಪ್ಪ, ಗೆದ್ದಲಗಟ್ಟೆ ಶಾಲೆ ಪ್ರಭಾರ ಮುಖ್ಯಶಿಕ್ಷಕ ಡಿ.ರಾಜಪ್ಪ, ಶಿಕ್ಷಕರಾದ ಮಂಗಳಮ್ಮ, ಶಬಾನಾ, ದುರ್ಗಮ್ಮ, ಹರವದಿ ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net