ಯೋಗಾಭ್ಯಾಸಕ್ಕೆ ಉಚಿತ ನಿವೇಶನ ಕೊಡಿ: ಪತಂಜಲಿ ಯೋಗ ಸಮಿತಿ ಕಂಪ್ಲಿ ಘಟಕ ಒತ್ತಾಯ

091122 Kampli Patanjali Yoga Appeal
ನಿವೇಶನ ಉಚಿತವಾಗಿ ನೀಡುವಂತೆ ಆಗ್ರಹಿಸಿ ಪುರಸಭೆ ಸಮುದಾಯ ಸಂಘಟಕಿ ಎಂ.ವಸಂತಮ್ಮಗೆ ಪತಂಜಲಿ ಯೋಗ ಸಮಿತಿ ಬುಧವಾರ ಮನವಿ ಸಲ್ಲಿಸಿತು.
Published on

ಕಂಪ್ಲಿ: ಜನತೆಗೆ ಯೋಗಾಭ್ಯಾಸ ಕಲಿಸಲು ಉಚಿತ ನಿವೇಶನ ನೀಡಬೇಕು ಎಂದು ಇಲ್ಲಿನ ಪತಂಜಲಿ ಯೋಗ ಸಮಿತಿ ಕಂಪ್ಲಿ ಘಟಕ ಅಧ್ಯಕ್ಷ ಟಿ.ಕೊಟ್ರೇಶ್ ಒತ್ತಾಯಿಸಿದರು.

ಪುರಸಭೆ ಸಮುದಾಯ ಸಂಘಟಕಿ ಎಂ.ವಸಂತಮ್ಮಗೆ ಬುಧವಾರ ಮನವಿ ಸಲ್ಲಿಸಿ, 18ವರ್ಷಗಳಿಂದ ಪಟ್ಟಣದಲ್ಲಿ ಪತಂಜಲಿ ಯೋಗ ಸಮಿತಿ ಸದಸ್ಯರು ಯೋಗಾಭ್ಯಾಸ ಮಾಡುತ್ತ ಜನತೆಯಲ್ಲಿ ಈ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಖಾಸಗಿ ಸ್ಥಳಗಳಲ್ಲಿ ಉಚಿತ ಯೋಗಾಭ್ಯಾಸ ತರಗತಿಗಳನ್ನು ನಡೆಸುತ್ತ ಬಂದಿದೆ. ರಾಷ್ಟ್ರಮಟ್ಟದ ಯೋಗ ಸಾಧಕರಾದ ರಾಮದೇವ ಗುರೂಜಿ, ಸಿದ್ಧೇಶ್ವರ ಸ್ವಾಮೀಜಿ, ವಚನಾನಂದ ಸ್ವಾಮಿಗಳನ್ನು ಪಟ್ಟಣಕ್ಕೆ ಕರೆಯಿಸಿ ಯೋಗಾಭ್ಯಾಸ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆರೋಗ್ಯ ಮತ್ತು ಯೋಗ್ಯಾಭ್ಯಾಸ ತರಗತಿಗಳನ್ನು ನಡೆಸಲು ನಿವೇಶನದ ಅಗತ್ಯವಿದೆ. ಪುರಸಭೆಯು ವಿವಿಧೋದ್ಧೇಶಗಳಿಗಾಗಿ ಮೀಸಲಿಟ್ಟ ಸ್ಥಳದಲ್ಲಿ, ಯೋಗ ಸಮಿತಿಗೆ 100 ಅಡಿ ಉದ್ದಗಲದ ನಿವೇಶನ ನೀಡಿ, ಯೋಗಕಟ್ಟೆಯನ್ನು ನಿರ್ಮಿಸಿ ಕೊಡುವಂತೆ ಒತ್ತಾಯಿಸಿದರು.

ಪತಂಜಲಿ ಯೋಗ ಸಮಿತಿ ತಾಲೂಕು ಪ್ರಭಾರ ಡಿ.ಮೌನೇಶ್, ಪದಾಧಿಕಾರಿಗಳಾದ ಎಸ್.ಜಿ.ಚಿತ್ರಗಾರ್, ವಿ.ರಾಮಲಿಂಗಯ್ಯ, ಡಿ.ವಿ.ಸುಬ್ಬಾರಾವ್, ಡಿ.ರುದ್ರಪ್ಪ, ಕಾರೇಮಂಗಿ ತಿಪ್ಪೇಸ್ವಾಮಿ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net