

ಕಂಪ್ಲಿ: ಗಂಗಾವತಿಯಲ್ಲಿ ಭಾನುವಾರ ಆಯೋಜಿಸಿದ್ದ ಕಲಬುರಗಿ ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಇಲ್ಲಿನ ಯಕ್ಷ ಯೋಗ ಸಂಸ್ಥೆ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ವೈ.ಎಸ್.ಯೋಗೇಶ್ ಪ್ರಥಮ ಸ್ಥಾನ ಪಡೆದು 2 ಚಿನ್ನದ ಪದಕ ಪಡೆದಿದ್ದಾರೆ. ಎಸ್.ನವ್ಯಾ-ಬೆಳ್ಳಿ ಹಾಗೂ ಯೋಗ ನೃತ್ಯದಲ್ಲಿ ಎಸ್.ಪೂಜಾ ಕಂಚಿನ ಪದಕ, ಎಸ್.ಶಶಾಂಕ ದ್ವೀತಿಯ ಹಾಗೂ ಬಿ.ಎಂ.ಮಣಿಕಂಠ, ಎಸ್.ಗೌತಮಿ ತೃತೀಯ ಸ್ಥಾನ ಪಡೆದು ಬೆಳ್ಳಿ ಪದಕ, ಎಸ್.ಭೂಮಿಕಾ, ಜೆ.ನಯನಾ ಸಮಾಧಾನಕರ ಬಹುಮಾನ ಪಡೆದಿದ್ದಾರೆ ಎಂದು ಯಕ್ಷ ಯೋಗ ಸಂಸ್ಥೆಯ ಶಿಕ್ಷಕಿ ಎಂ.ಶ್ಯಾಮಲಾ ವೈ.ವಿಜಯಲಕ್ಷ್ಮೀ ತಿಳಿಸಿದ್ದಾರೆ.