ಸ್ತ್ರೀ ಸ್ವಾತಂತ್ರ್ಯ ಹರಣಕ್ಕೆ ಮಹಿಳೆಯೇ ಕಾರಣ

15 KAMPLI 03
Published on

ಕಂಪ್ಲಿ: ಮಹಿಳೆ ಸ್ವಾತಂತ್ರ್ಯ ಕಳೆದುಕೊಂಡಿದ್ದು ಸ್ತ್ರೀಯರಿಂದಲೇ ಹೊರತು ಪುರುಷರಿಂದಲ್ಲ ಎಂದು ಇಲ್ಲಿನ ಪವಿತ್ರಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಪವಿತ್ರಾ ಗೌಡ ಹೇಳಿದರು.

ಇಲ್ಲಿನ ಪವಿತ್ರಾ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಅತ್ತೆ-ಸೊಸೆ ತಾಯಿ ಮಗಳಂತೆ ಸಮಾನ ಗೌರವದೊಂದಿಗೆ ಬದುಕಿದಾಗ ಸ್ತ್ರೀಗೆ ಸ್ವಾತಂತ್ರ್ಯ ದೊರಕುತ್ತದೆ. ಹಿಂದಿನಿಂದಲೂ ಸ್ತ್ರೀಯಿಂದಲೇ ಮಹಿಳೆ ಸಮಾನತೆ ಕಳೆದುಕೊಂಡಿದ್ದಾಳೆ. ಮಕ್ಕಳಿಗೆ ಶಿಕ್ಷಣ, ಪೋಷಣೆ, ಸ್ಥಾನಮಾನ ನೀಡುವಲ್ಲಿ ಲಿಂಗ ತಾರತಮ್ಯ ಮಾಡಬಾರದು ಎಂದು ಸಲಹೆ ನೀಡಿದರು.

ಟ್ರಸ್ಟ್ ಉಪಾಧ್ಯಕ್ಷ ಶಿವನಗೌಡ, ಕೊಳೂರು ಟೈಲರಿಂಗ್ ಶಿಕ್ಷಕಿ ವಿದ್ಯಾಶ್ರೀ, ಸಿಬ್ಬಂದಿ ಸ್ವಾತಿ, ಗಂಗಾ, ಆಶಾಕುಮಾರಿ, ಪ್ರಮುಖರಾದ ವಿವೇಕಾನಂದ ಬೇವಿನಹಾಳ್, ಬಸವನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net