

ಕಂಪ್ಲಿ: ತಾಲೂಕಿನ ಸಣಾಪುರ ಮತ್ತು ಇಟಗಿ, ನಂ.2ಮುದ್ದಾಪುರ ಗ್ರಾಮಗಳಲ್ಲಿ ದೇವಸಮುದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಶನಿವಾರ ರಕ್ತದಾನ ಶಿಬಿರ ನಡೆಯಿತು.
ಇಟಗಿಯಲ್ಲಿ ಗ್ರಾಪಂ ಅಧ್ಯಕ್ಷ ರಮಣಯ್ಯ ಶಿಬಿರಕ್ಕೆ ಚಾಲನೆ ನೀಡಿ, ವಯಸ್ಕರು ರಕ್ತದಾನ ಮಾಡುವಲ್ಲಿ ಜಾಗೃತಿ ತೋರಬೇಕು. ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದ್ದು ಪ್ರಾಣ ಕಾಪಾಡುವಂತಾಗಿದೆ.
ರಕ್ತದಾನ ಮಾಡಲು ಯುವಜನತೆ ದುಶ್ಚಟಗಳಿಂದ ವಿಮುಖರಾಗಿ ಆರೋಗ್ಯವಂತರಾಗಬೇಕು ಎಂದರು. ಸಣಾಪುರದಲ್ಲಿ ಗ್ರಾಪಂ ಸದಸ್ಯ ಹನುಮಂತಪ್ಪ, ನಂ.2 ಮುದ್ದಾಪುರದಲ್ಲಿ ಗ್ರಾಪಂ ಸದಸ್ಯ ಭಾಸ್ಕರರೆಡ್ಡಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಸಣಾಪುರದಲ್ಲಿ 32, ಇಟಗಿಯಲ್ಲಿ 13, ನಂ.2ಮುದ್ದಾಪುರದಲ್ಲಿ 15 ಯುನಿಟ್ ರಕ್ತ ಸಂಗ್ರಹಿಸಲಾಯಿತು. ದೇವಸಮುದ್ರ ಪಿಎಚ್‌ಸಿ ವೈದ್ಯಾಧಿಕಾರಿ ರೇವಣಸಿದ್ದ ಕೋರಿ, ಮುಖಂಡ ರಘುರಾಮ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕ ಪಿ.ಬಸವರಾಜ, ಆರೋಗ್ಯ ನಿರೀಕ್ಷಣಾಧಿಕಾರಿ ಜಗನ್ನಾಥ, ಯರ‌್ರಿಸ್ವಾಮಿ, ಸಿಎಚ್‌ಒ ಲಕ್ಷ್ಮೀಕಲ್ಯಾಣಿ, ಆಶಾ ಕಾರ್ಯಕರ್ತೆಯರಾದ ಮೀನಾಕ್ಷಿ, ಹುಲುಕುಂದೆಮ್ಮ, ರೇಣುಕಮ್ಮ, ಗೌರಮ್ಮ, ರೂಪಿಣಿ, ಸವಿತಾ, ಭಾಗ್ಯ ಇತರರಿದ್ದರು.