ಗಾಳಿ ಮಳೆಗೆ ಕಂಪ್ಲಿಯಲ್ಲಿ ನೆಲಕ್ಕುರುಳಿದ ವಿದ್ಯುತ್ ಕಂಬಗಳು, ಎರಡು ಟಿಸಿ ಹಾಳು

04062021 Kampli Power poles down
Published on

ಕಂಪ್ಲಿ: ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬುಧವಾರ ಮತ್ತು ಗುರುವಾರ ಸುರಿದ ಮಳೆಗೆ ಮನೆ ಗೋಡೆ ಕುಸಿತದ ಜತೆಗೆ 12 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ದೇವಲಾಪುರ ಗ್ರಾಮದ 1ನೇ ವಾರ್ಡ್‌ನ ದೊಡ್ಡ ಬಸಮ್ಮ ಎನ್ನುವವರ ಹಳೇ ಮನೆ ಗೋಡೆ ಕುಸಿದಿದ್ದು, ಯಾವುದೇ ಅನಾಹುತ ನಡೆದಿಲ್ಲ.ಸಣಾಪುರ ಹಾಗೂ ಜಿರೀಗನೂರು ಗ್ರಾಮಗಳಲ್ಲಿನ 100ಕೆವಿ ಸಾಮರ್ಥ್ಯದ ಎರಡು ವಿದ್ಯುತ್ ಪರಿವರ್ತಕಗಳು ಸುಟ್ಟಿವೆ.

ಜವುಕು ಗ್ರಾಮದಲ್ಲಿ 6 ವಿದ್ಯುತ್ ಕಂಬಗಳು, ದೇವಸಮುದ್ರ, ಜೀರಿಗನೂರು ಮತ್ತು ಸಣಾಪುರ ಗ್ರಾಮಗಳಲ್ಲಿ ತಲಾ ಎರಡು ಕಂಬಗಳು ನೆಲಕ್ಕುರುಳಿವೆ. ವಿದ್ಯುತ್ ಕಂಬಗಳ ಸರಿಪಡಿಸುವ ಕಾರ್ಯ ಜರುಗುತ್ತಿದೆ ಎಂದು ಗ್ರಾಮೀಣ ಎಇ ಮಹಾಂತೇಶ್ ತುಂಬಳದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net