ನೀರನ್ನು ಹಿತಮಿತವಾಗಿ ಬಳಸಿ

101222 Kampli Home to Home Survey
ಕಂಪ್ಲಿಯ ದೇವಾಂಗಪೇಟೆಯಲ್ಲಿ ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ ಒಂಬತ್ತು ಪಟ್ಟಣಗಳ ಕುಡಿವ ಯೋಜನೆ ಜತೆ, ಬೀದಿ ದೀಪ ಮತ್ತು ಚರಂಡಿಸ್ವಚ್ಛತೆ ಕುರಿತು ಮನೆ ಮನೆ ಸಮೀಕ್ಷೆ ನಡೆಸಿದರು.
Published on

ಕಂಪ್ಲಿ: ಒಂಬತ್ತು ಪಟ್ಟಣಗಳ ಕುಡಿವ ನೀರಿನ ಯೋಜನೆ ಜತೆ, ಬೀದಿ ದೀಪ ಮತ್ತು ಚರಂಡಿ ಸ್ವಚ್ಛತೆ ಕುರಿತು ಪಟ್ಟಣದ 14ನೇವಾರ್ಡ್‌ನಲ್ಲಿ ಮನೆ ಮನೆ ಸಮೀಕ್ಷೆ ಶನಿವಾರ ಜರುಗಿತು. ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ ಮಾತನಾಡಿ, ಒಂಬತ್ತು ಪಟ್ಟಣಗಳ ಕುಡಿವ ನೀರು ಸರಬರಾಜು ಯೋಜನೆ ಸಮೀಕ್ಷೆ ಕೈಗೊಂಡಿದ್ದು, ನೀರು ಸರಬರಾಜು ಸಮಯ, ನೀರಿನ ಸಾಮರ್ಥ್ಯ, ಒತ್ತಡ ಮತ್ತು ಪ್ರಮಾಣ, ಸಮರ್ಪಕ ಪೂರೈಕೆ ಕುರಿತು ನಳದ ಬಳಕೆದಾರರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದರೊಟ್ಟಿಗೆ ಬೀದಿದೀಪ, ಚರಂಡಿ ಸ್ವಚ್ಛತೆ ಕುರಿತು ಮಾಹಿತಿ ವಿಚಾರಿಸಲಾಯಿತು. ನೀರನ್ನು ಹಿತಮಿತವಾಗಿ ಬಳಸುವಂತೆ, ನಲ್ಲಿಗೆ ಟ್ಯಾಪ್, ಕ್ಯಾಪ್‌ಗಳನ್ನು ಅಳವಡಿಸುವಂತೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net