ದೂರದೃಷ್ಟಿ ಹೊಂದಿದ್ದ ರಾಜಕೀಯ ನೇತಾರ

Kampli Urs
ಕಂಪ್ಲಿ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಬಿಸಿಎಂ ಹಾಸ್ಟೆಲ್ ಮೇಲ್ವಿಚಾರಕ ಮಲ್ಲಿಕಾರ್ಜುನ ಮಾತನಾಡಿದರು. ವಿಎಗಳಾದ ಲಕ್ಷ್ಮಣನಾಯ್ಕ, ಎಚ್.ವಿ.ಮಂಜುನಾಥ, ಮಾಲತೇಶ ದೇಶಪಾಂಡೆ ಇತರರಿದ್ದರು.
Published on

ಕಂಪ್ಲಿ: ರೈತರು, ಹಿಂದುಳಿದವರ ಕಲ್ಯಾಣಕ್ಕಾಗಿ ಶ್ರಮಿಸಿದ ಮಾಜಿ ಸಿಎಂ ದೇವರಾಜ ಅರಸು ಅವರು ಸದಾ ಸ್ಮರಣೀಯರು ಎಂದು ಬಿಸಿಎಂ ವಸತಿ ನಿಲಯದ ಮೇಲ್ವಿಚಾರಕ ಮಲ್ಲಿಕಾರ್ಜುನ ಹೇಳಿದರು.

ತಾಲೂಕು ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ದೇವರಾಜ ಅರಸು ಜನ್ಮದಿನ ಹಾಗೂ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರಸು ದೂರದೃಷ್ಟಿಯ ರಾಜಕೀಯ ನಾಯಕರಾಗಿದ್ದರು. ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿಎ ಲಕ್ಷ್ಮಣ ನಾಯ್ಕ ಮಾತನಾಡಿ, ಎಲ್ಲ ಧರ್ಮ, ಭಾಷೆ ಹಾಗೂ ಜನರಲ್ಲಿ ಸೌಹಾರ್ದ ಮೂಡಿಸಿ, ಹಿಂಸಾಚಾರದಿಂದ ವಿಮುಖರನ್ನಾಗಿಸಲು ಸದ್ಭವನಾ ದಿನ ಆಚರಿಸಲಾಗುತ್ತಿದೆ. ದೇಶದ ಜನ ಧರ್ಮ, ಭಾಷೆ, ಗಡಿ ಮೀರಿ ಸಾಮರಸ್ಯ, ಭಾವೈಕ್ಯ, ಏಕತೆ ಮೈಗೂಡಿಸಿಕೊಳ್ಳಬೇಕು ಎಂದರು. ವಿಎಗಳಾದ ಎಚ್.ವಿ.ಮಂಜುನಾಥ, ಮಾಲತೇಶ ದೇಶಪಾಂಡೆ, ನೌಕರ ಮನೋಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net