ಪಾಲಕರು ಮಕ್ಕಳಿಗೆ ಸಂಸ್ಕಾರ ಕಲಿಸಲಿ

Untitled design11
ಬುಕ್ಕಸಾಗರದ ಕರಿಸಿದ್ದೇಶ್ವರ ಸಂಸ್ಥಾನಮಠದಲ್ಲಿ ಜಂಗಮವಟುಗಳಿಗೆ ಶಿವದೀಕ್ಷೆ ನೀಡಲಾಯಿತು. ವಿಶ್ವಾರಾಧ್ಯ ಶಿವಾಚಾರ್ಯರು, ಪುರೋಹಿತರಾದ ಕೇಸರಟ್ಟಿಯ ಶಿವಪುತ್ರಯ್ಯ, ಬುಕ್ಕಸಾಗರ ಕಾರ್ತೀಕ್‌ಶಾಸ್ತ್ರಿ ಇದ್ದರು.
Published on

ಕಂಪ್ಲಿ: ಶಿವದೀಕ್ಷೆ ಪಡೆದ ಜಂಗಮವಟುಗಳು ಧರ್ಮದ ಆಚಾರ ವಿಚಾರಗಳನ್ನು ಪಾಲಿಸಬೇಕು ಎಂದು ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನಮಠದ ವಿಶ್ವಾರಾಧ್ಯ ಶಿವಾಚಾರ್ಯ ಹೇಳಿದರು.

ಧರ್ಮದ ಆಚಾರ ವಿಚಾರಗಳನ್ನು ಪಾಲಿಸಿ

ಬುಕ್ಕಸಾಗರದ ಕರಿಸಿದ್ದೇಶ್ವರ ಸಂಸ್ಥಾನಮಠದಲ್ಲಿ ಲಿಂ.ಕರಿಸಿದ್ದೇಶ್ವರ ಶಿವಯೋಗಿಗಳ ಪುಣ್ಯಾರಾಧನೆ, ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಶಿವದೀಕ್ಷೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು. ವೀರಶೈವ ಧರ್ಮದ ತತ್ವ ಸಿದ್ಧಾಂತಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ ಆಚಾರ, ವಿಚಾರ, ಸಂಸ್ಕಾರಗಳನ್ನು ಕಲಿಸಲು ಪಾಲಕರು ಮುಂದಾಗಬೇಕು ಎಂದರು.
ಕೇಸರಟ್ಟಿಯ ಶಿವಪುತ್ರಯ್ಯ, ಬುಕ್ಕಸಾಗರದ ಕಾರ್ತೀಕಶಾಸ್ತ್ರಿ ಅವರ ಪೌರೋಹಿತ್ಯದಲ್ಲಿ ನಾಲ್ವರು ಜಂಗಮವಟುಗಳಿಗೆ ಶಿವದೀಕ್ಷೆ(ಅಯ್ಯಚಾರ) ನೀಡಲಾಯಿತು. ಪ್ರಮುಖರಾದ ಎಚ್.ಎಂ.ವಿಶ್ವನಾಥಸ್ವಾಮಿ, ಸಂತೋಷ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net