ನಾನಾ ಕಾಮಗಾರಿಗಳಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ

040222 MLA JN Ganesh landslide for CC road construction in Kampli
ಕಂಪ್ಲಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
Published on

ಕಂಪ್ಲಿ: ಪಟ್ಟಣದ ಇಂದಿರಾನಗರದ ಅಲ್ಪಸಂಖ್ಯಾತರ ಕಾಲನಿಯಲ್ಲಿ 2020-21ನೇ ಸಾಲಿನ ಠೇವಣಿವಂತಿಗೆ ಯೋಜನೆಯ 30 ಲಕ್ಷ ರೂ.ನಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಶುಕ್ರವಾರ ಚಾಲನೆ ನೀಡಿದರು.

ಎಂ.ಡಿ.ಕ್ಯಾಂಪಿನ ನಾಗಮ್ಮ ದೇವಸ್ಥಾನ ಬಳಿಯಲ್ಲಿ 2021-22ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯಡಿ 16.44 ಲಕ್ಷ ರೂ.ಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಿ, ಎಮ್ಮಿಗನೂರು ಜಡೇಶ ನಗರದಲ್ಲಿ ಬಾಸ್ಕೆಟ್‌ಬಾಲ್ ಕ್ರೀಡಾಂಗಣ ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿ ಬಸವರಾಜಗೌಡ, ಪ್ರಮುಖರಾದ ಭಟ್ಟ ಪ್ರಸಾದ್, ಕರಿಬಸವನಗೌಡ, ಆರ್.ಪಿ.ಶಶಿಕುಮಾರ್, ಕೆ.ಷಣ್ಮುಖಪ್ಪ, ಮಹ್ಮದೀಯ ಮಸೀದಿ ಅಧ್ಯಕ್ಷ ಹಸೇನ್‌ಸಾಬ್, ಹೋಟೆಲ್ ಶೆಕ್ಷಾವಲಿ, ಡ್ರೈವರ್ ಚಾಂದ್‌ಬಾಷ, ಜಿ.ರಾಜಾ ಮಹ್ಮದ್, ಆಟೋ ರಾಘವೇಂದ್ರ, ಹಬೀಬ್ ರೆಹಮಾನ್, ರಾವುಲ್ ನಾಗಪ್ಪ, ಎಸ್.ಆರ್.ಭಾಷ, ಬಿ.ಜಾಫರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net