

ಕಂಪ್ಲಿ: ಪಟ್ಟಣದ ಎಂಡಿ ಕ್ಯಾಂಪ್‌ನ ಸರ್ಕಾರಿ ಕಿಪ್ರಾ ಶಾಲೆಯ ಮಕ್ಕಳ ಶಿಕ್ಷಣಕ್ಕಾಗಿ ವಠಾರ ಶಾಲೆ ಆರಂಭವಾಗಿದೆ. ಆದರೆ ಕರೊನಾ ಭೀತಿಯಿಂದ ಸ್ಕೂಲ್ ಆವರಣಕ್ಕೆ ಸ್ಥಳಾಂತರಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯದವರೇ ಹೆಚ್ಚಾಗಿ ವಾಸಿಸುವ ಕ್ಯಾಂಪ್‌ನಲ್ಲಿ ಶಾಲೆ ಆರಂಭದಿಂದ ಮಕ್ಕಳು ಪಾಲಕರಿಗೆ ಸಂತಸ ತಂದಿತ್ತು. ಆದರೆ ಪಕ್ಕದ ಓಣಿಯಲ್ಲಿ ಕರೊನಾದಿಂದ ಸೀಲ್‌ಡೌನ್ ಮಾಡಿರುವುದರಿಂದ ಶಾಲೆಯನ್ನು ಶುಕ್ರವಾರ ಶಾಲಾವರಣಕ್ಕೆ ಸ್ಥಳಾಂತರ ಮಾಡಲಾಗಿದೆ. ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ 15ರಿಂದ 20 ವಿದ್ಯಾರ್ಥಿಗಳಿದ್ದು, ಮಾಸ್ಕ್, ದೈಹಿಕ ಅಂತರ ಪಾಲಿಸಿ ಒಂದೂವರೆ ಗಂಟೆ ಪಾಠ ಹೇಳಿಕೊಡಲಾಗುತ್ತಿದೆ. ಹೀಗಾಗಿ ಶಾಲೆ ಸ್ಥಳಾಂತರಕ್ಕೆ ಪಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕ್ಯಾಂಪ್‌ನಲ್ಲಿ ಸ್ವಚ್ಛತೆ ಸೇರಿ ಇತರ ಸಮಸ್ಯೆಗಳು ಇವೆ. ಶಾಲೆಯಲ್ಲಿ ಬೋರ್ಡ್, ಪ್ಲಾಶ್‌ಕಾರ್ಡ್ ಇತರ ಕಲಿಕಾ ಸಾಧನ ತೋರಿಸಿ ಪರಿಣಾಮಕಾರಿಯಾಗಿ ಬೋಧಿಸಬಹುದು. ಹೀಗಾಗಿ ಮಕ್ಕಳ ಹಿತ ದೃಷ್ಟಿಯಿಂದ ಪಾಲಕರು ಸಭೆ ನಡೆಸಿ ಶಿಕ್ಷಣ ಇಲಾಖೆ ಗಮನಕ್ಕೆ ತಂದಲ್ಲಿ ಶಾಲೆಯಲ್ಲಿಯೇ ಪಾಠ ಹೇಳಬಹುದು ಎನ್ನುತ್ತಾರೆ ಮುಖ್ಯಶಿಕ್ಷಕ ಎ.ನಾಗರಾಜ, ಶಿಕ್ಷಕಿ ಎಸ್.ಸರಸ್ವತಿ.