ಕಂಪ್ಲಿ ಉತ್ಸವದ ಪೂರ್ವಭಾವಿ ಸಭೆ ಕರೆಯಿರಿ

130123 Kampli Karave
ಕಂ್ಪಲಿ ತಹಸೀಲ್ದಾರ್ ಗೌಸಿಯಾಬೇಗಮ್‌ಗೆ ಶುಕ್ರವಾರ ಮನವಿ ಸಲ್ಲಿಸಿದ ಕರವೇ ಪದಾಧಿಕಾರಿಗಳು, ಕಂಪ್ಲಿ ಉತ್ಸವದ ಪೂರ್ವಭಾವಿ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.
Published on

ಕಂಪ್ಲಿ: ಕಂಪ್ಲಿ ಉತ್ಸವದ ಪೂರ್ವಭಾವಿ ಸಭೆ ನಡೆಸುವಲ್ಲಿ ಜಿಲ್ಲಾಧಿಕಾರಿ ಮುಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಕುಮಾರ್ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ರಮೇಶ್ ಹೇಳಿದರು.

ತಹಸೀಲ್ದಾರ್ ಗೌಸಿಯಾಬೇಗಮ್‌ಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದರು. 2023ರ ಫೆ.12ರಂದು ಕಂಪ್ಲಿ ಉತ್ಸವ ಒಂದು ದಿನ ಆಚರಿಸುವುದಾಗಿ ತಿಳಿದು ಬಂದಿದ್ದು, ಒಂದು ದಿನದ ಬದಲಿಗೆ ಎರಡು ದಿನ ಆಚರಿಸಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿ, ಉತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಬೇಕು. ಪೂರ್ವಭಾವಿ ಸಭೆಯನ್ನು ನಡೆಸಿ, ಕನ್ನಡಪರ ಸಂಘಟನೆ, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳನ್ನು, ನಾಗರಿಕರನ್ನು ಸಭೆಗೆ ಆಹ್ವಾನಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಸಿ.ಎಂ.ಶಿವಯ್ಯಸ್ವಾಮಿ, ಕೆ.ರಂಗಪ್ಪ, ತುಕರಾಮ್ ಹವಳೆ, ನೀಲಕಂಠ, ಬಿ.ಪರಶುರಾಮ, ಗಂಡಿ ಗಣೇಶ್, ಜಿ.ಬಸವರಾಜ್, ಕೋರಿ ಚನ್ನಬಸವ, ಬುದ್ದಿ ಕೇಶವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net