ಕಂಪ್ಲಿಯಲ್ಲಿ ಉಡಿ ತುಂಬುವ ಕಾರ್ಯಕ್ರಮ

Kampli Habba
ಕಂಪ್ಲಿಯ ಮನೆಯೊಂದರಲ್ಲಿ ಶುಕ್ರವಾರ ಲಕ್ಷ್ಮೀದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ಕಂಪ್ಲಿ: ಪಟ್ಟಣ ಸೇರಿ ವಿವಿಧೆಡೆ ವರಮಹಾಲಕ್ಷ್ಮೀ ಹಬ್ಬ ಆಚರಿಸಲಾಯಿತು. ದೇವಸ್ಥಾನ, ಮನೆಗಳಲ್ಲಿ ಅಭಿಷೇಕ, ಲಕ್ಷ್ಮೀ ಅಷ್ಟೋತ್ತರ, ಮಂಗಳಾರತಿಯೊಂದಿಗೆ ಮಹಾಲಕ್ಷ್ಮೀ ಪೂಜೆ ಸಲ್ಲಿಸಲಾಯಿತು.

ದೇವಿಯನ್ನು ಬೆಳ್ಳಿ ಕವಚದಿಂದ ಅಲಂಕರಿಸಿ, ಉಮಾಮಹೇಶ್ವರರನ್ನು ಸ್ಥಾಪಿಸಿ, ಹೊಸ ನಾಣ್ಯಗಳನ್ನು ಇಟ್ಟು ಪೂಜಿಸಲಾಯಿತು.

ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು ಎಂದು ಪಟ್ಟಣದ ಶ್ರೀಪೇಟೆ ಬಸವೇಶ್ವರ ದೇವಸ್ಥಾನದ ಅರ್ಚಕ ಕೆ.ಎಂ.ಚಂದ್ರಶೇಖರಸ್ವಾಮಿ, ಕೆ.ಸಿ.ಸಿದ್ಧರಾಮೇಶ್ವರ ಶಾಸ್ತ್ರಿ ತಿಳಿಸಿದರು.

ಪಟ್ಟಣದ ಪೇಟೆಯಲ್ಲಿ ತರಕಾರಿ, ಹಣ್ಣುಗಳು, ತೆಂಗಿನಕಾಯಿ, ಹೂ, ಬಾಳೆಕಂಬ, ತಳಿರುತೋರಣ ಸೇರಿ ಮಂಗಳದ್ರವ್ಯಗಳ ಮಾರಾಟ ಜೋರಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net