ಎರಡೇ ಕೇಂದ್ರಗಳಲ್ಲಿ ಅರ್ಜಿ ಸ್ವೀಕಾರ

Kampli Application
Published on

ಕಂಪ್ಲಿ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಪಟ್ಟಣದಲ್ಲಿ ಪುರಸಭೆ ವಾರ್ಡ್‌ಗಳನ್ನು ವಿಂಗಡಿಸಿ ಐದು ಕೇಂದ್ರ ತೆರೆದಿದ್ದರೂ, ಸದ್ಯ ಎರಡು ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತಿದೆ.

ಮಹಿಳೆಯರು ಕೇಂದ್ರಗಳಿಗೆ ತೆರಳಿದರೂ ಲಿಂಕ್ ದೊರಕದ ಕಾರಣ ವಾಪಸಾಗುತ್ತಿದ್ದಾರೆ. ಶುಕ್ರವಾರ ಮಾರುತಿ ನಗರದ ಸಮುದಾಯ ಭವನ ಮತ್ತು ಕೋಟೆಯ ಸಮುದಾಯ ಭವನಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿತ್ತು. ಉಳಿದ ಮೂರು ಕೇಂದ್ರಗಳಲ್ಲಿ ಲಿಂಕ್ ದೊರಕದ ಕಾರಣ ಅರ್ಜಿ ಸಲ್ಲಿಸಲು ಬಂದವರು ಹಿಂದಿರುಗುವುದು ಕಂಡು ಬಂತು. ಪಡಿತರ ಚೀಟಿಗೆ ಲಿಂಕ್ ಮಾಡಿದ ಮೊಬೈಲ್‌ಗೆ ಮೆಸೇಜ್ ಬಂದವರು ಮಾತ್ರ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಬರಬೇಕು ಎನ್ನುವ ಹೊಸ ಸಂದೇಶ ಫಲಾನುಭವಿಗಳನ್ನು ಗೊಂದಲಗಳಿಗೆ ಈಡು ಮಾಡಿದೆ.

ಒಂದು ಕೇಂದ್ರದಲ್ಲಿ ಪ್ರತಿದಿನ 60 ಜನರಿಂದ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತಿದೆ. ಐದರ ಪೈಕಿ ಎರಡು ಕೇಂದ್ರಗಳಲ್ಲಿ ಮಾತ್ರ ಅರ್ಜಿ ಪಡೆಯುತ್ತಿದ್ದು, ಮೇಸೇಜ್ ಬಂದವರಿಗೆ ಮಾತ್ರ ಅವಕಾಶ ಇದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net