ಇಪ್ಪತ್ತು ಕ್ವಿಂಟಾಲ್ ಜೋಳ ಖರೀದಿಸಿ

Kampli Jola
ಕಂಪ್ಲಿಯಲ್ಲಿ ಜೋಳ ಖರೀದಿಗಾಗಿ ಹೆಸರು ನೋಂದಣಿ ಮಾಡಿಸುತ್ತಿರುವ ರೈತರು.
Published on

ಕಂಪ್ಲಿ: ಇಲ್ಲಿನ ಎಪಿಎಂಸಿ ಕಚೇರಿಯಲ್ಲಿ ಆರಂಭಿಸಿರುವ ಜೋಳ ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿಗೆ ಮುಂದಾದ ರೈತರು ಹತ್ತು ಕ್ವಿಂಟಾಲ್ ಬದಲಿಗೆ 20 ಕ್ವಿಂ. ಜೋಳ ಖರೀದಿಸುವಂತೆ ಒತ್ತಾಯಿಸಿದರು.

ಜೋಳ ಖರೀದಿ ಕೇಂದ್ರದ ಅಧಿಕಾರಿ ಹೊನ್ನಾಳಿಯ ಎಪಿಎಂಸಿ ಹಿರಿಯ ಸಹಾಯಕ ರಂಗಪ್ಪ ಮಾತನಾಡಿ, ಪ್ರತಿ ರೈತರಿಂದ ಕ್ವಿಂಟ್ಾಗೆ 3180 ರೂ.ನಂತೆ ಗುಣಮಟ್ಟದ ಹತ್ತು ಕ್ವಿಂ. ಜೋಳ ಖರೀದಿಸಲು ಹೆಸರು ನೋಂದಣಿ ಪ್ರಕ್ರಿಯೆ ನಡೆದಿದೆ. ಡಿ.29ರಿಂದ ಈತನಕ 584 ರೈತರು ಹೆಸರು ನೋಂದಾಯಿಸಿದ್ದಾರೆ. ಜ.31ರವರೆಗೆ ಅವಕಾಶವಿದೆ. ಕಳೆದ ವರ್ಷ 747ರೈತರು ಹೆಸರು ನೋಂದಾಯಿಸಿದ್ದು, ಈ ವರ್ಷ ಇನ್ನಷ್ಟು ಹೆಚ್ಚಿನ ರೈತರು ನೋಂದಣಿ ಮಾಡಿಸಬಹುದು ಎಂದರು.

ಎಕರೆಗೆ ಸರಾಸರಿ 20 ಕ್ವಿಂ. ಜೋಳ ಬೆಳೆಯಲಾಗುತ್ತಿದ್ದು, ಹತ್ತು ಕ್ವಿಂ. ಬದಲಿಗೆ 20 ಕ್ವಿಂ. ಖರೀದಿಸಬೇಕು. ಸದ್ಯ 10 ಕ್ವಿಂಟಾಲ್ ಕೊಳ್ಳುವುದರಿಂದ ಉಳಿದ ಜೋಳ ಮಾರಾಟಕ್ಕೆ ರೈತರು ಪರದಾಡಬೇಕಾಗುತ್ತದೆ.

ಸದ್ಯ ಮಾರುಕಟ್ಟೆಯಲ್ಲಿ ಜೋಳ ದರ ಬೆಂಬಲಬೆಲೆಗಿಂತ ಕಡಿಮೆ 2,700 ರೂ. ಇದೆ. ಸರ್ಕಾರ ಎಕರೆಗೆ 20 ಕ್ವಿಂ.ಜೋಳ ಖರೀದಿಸಬೇಕು ಎಂದುರೈತರಾದ ಹಳೆನೆಲ್ಲೂಡಿ ಪೀರಾಸಾಹೇಬ್, ಕೊಲ್ಮಿರಾಜಸಾಬ್, ಎಮ್ಮಿಗನೂರು ಸಣ್ಣರುದ್ರಪ್ಪ ಇತರರು ಒತ್ತಾಯಿಸಿದರು. ಬಳ್ಳಾಪುರದ ದೊಡ್ಡಕರಿಯಪ್ಪ, ಹುಡೇದ ಬಸಪ್ಪ, ಕಾಸಿಂ ಸಾಬ್, ರೇಣುಕಪ್ಪ, ನಾರಾಯಣ, ಅಡವಿಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net