ನದಿ ನೀರನ್ನು ಶುದ್ಧೀಕರಿಸಿ ಕೊಡಿ; ನವಕರ್ನಾಟಕ ಯುವಶಕ್ತಿ ಒತ್ತಾಯ

10062022 Kampli appel
Published on

ಕಂಪ್ಲಿ : ತಾಲೂಕಿನ ನಂ.10ಮುದ್ದಾಪುರ, ಕಣವಿ ತಿಮ್ಮಲಾಪುರ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ಶುದ್ಧೀಕರಿಸಿ ಕುಡಿಯಲು ಪೂರೈಸುವಲ್ಲಿ ತಾಲೂಕು ಪಂಚಾಯಿತಿ ಆಡಳಿತ ಮುಂದಾಗಬೇಕು ಎಂದು ನವಕರ್ನಾಟಕ ಯುವಶಕ್ತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ವಿರೂಪಾಕ್ಷಿ ಯಾದವ್ ಒತ್ತಾಯಿಸಿದ್ದಾರೆ.

ತಾಪಂ ಇಒ ಮೊಹಮ್ಮದ್ ಖಿಜರ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು. ತಾಲೂಕಿನ ಎಲ್ಲ ಗ್ರಾಪಂ ಕಚೇರಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಜತೆಗೆ ಗ್ರಾಪಂ ನೌಕರರು ಸಕಾಲಕ್ಕೆ ಕೆಲಸಕ್ಕೆ ಹಾಜರಾಗಲು ಸಹಾಯಕವಾಗುವಂತೆ ಡಿಜಿಟಲ್ ಅಟೆಂಡೆನ್ಸ್(ಬಯೋ ಮೆಟ್ರಿಕ್ ಯಂತ್ರ) ಅಳವಡಿಸಬೇಕು ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಯು.ಹೊನ್ನೂರಸ್ವಾಮಿ, ವೈ.ಯಲ್ಲಪ್ಪ, ಪ್ರಹ್ಲಾದನಾಯಕ, ಕೊಟ್ರಬಸಪ್ಪ, ರಂಗಸ್ವಾಮಿ, ಎನ್.ಕುಮಾರ್, ನಾಗರಾಜ್, ವಿಜಯನಗರ ಜಿಲ್ಲಾಧ್ಯಕ್ಷ ಜಿ.ಗಂಗಾಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net