ಕಂಪ್ಲಿ ತುಂಗಭದ್ರಾ ನದಿ ತಟದ ಬಳಿ ಚೀಲದಲ್ಲಿ ತುಂಬಿ ರಾಶಿ ಹಾಕಿದ್ದ ಮರಳು ವಶ

130320 Kampli Tungabhadra Rive side Sand Seized
Published on

ಕಂಪ್ಲಿ: ನದಿ ದಂಡೆ ಬಳಿ ಸೂಚನಾ ಫಲಕ ಅಳವಡಿಸುವಂತೆ ಪಟ್ಟಣದ ಜೆವಿಸಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮನವಿ ಮೇರೆಗೆ ತಹಸೀಲ್ದಾರ್ ಎಂ.ರೇಣುಕಾ ತುಂಗಭದ್ರಾ ನದಿ ತಟಕ್ಕೆ ಬುಧವಾರ ಸಂಜೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಚಿಕ್ಕ ಜಂತಕಲ್‌ಭಾಗದ ತುಂಗಭದ್ರಾ ನದಿ ದಡ ಹಾಗೂ ಕಂಪ್ಲಿ ಕೋಟೆ ಭಾಗದ ನದಿ ದಡಕ್ಕೆ ತೆರಳಿ ಪರಿಶೀಲಿಸಿ ಚೀಲದಲ್ಲಿ ತುಂಬಿ ರಾಶಿ ಹಾಕಿದ್ದ ಮರಳನ್ನು ವಶಕ್ಕೆ ಪಡೆದರು. ನಾಲ್ಕು ಟ್ರ್ಯಾಕ್ಟರ್‌ಗಳಷ್ಟು ಮರಳಿನ ಚೀಲಗಳನ್ನು ವಶಪಡಿಸಿಕೊಂಡು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು. ಅಪಾಯದ ಸ್ಥಳದಲ್ಲಿ ಸೂಚನಾ ಫಲಕ ಅಳವಡಿಸುವ ಬಗ್ಗೆ ಜಿಲ್ಲಾಧಿಕಾರಿ ಸೇರಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಕಂದಾಯ ನಿರೀಕ್ಷಕ ಎಸ್.ಎಸ್.ತಂಗಡಗಿ, ಗ್ರಾಲೆ ಗಿರೀಶ್, ಲೋಕೋಪಯೋಗಿ ಇಲಾಖೆಯ ಜೆಇ ಪ್ರಾಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net