ಬೈಕ್‌ಗಳ ಓಡಾಟಕ್ಕೆ ಇನ್ನೂ ದೊರಕಲಿಲ್ಲ ಅನುಮತಿ

23072022 Kampli bridz
Published on

ಕಂಪ್ಲಿ: ತುಂಗಭದ್ರಾ ನದಿಗೆ ಜಲಾಶಯದಿಂದ ಹರಿದು ಬರುವ ನೀರಿನ ಪ್ರಮಾಣ ಕುಗ್ಗಿದರೂ ಸೇತುವೆ ಮೇಲೆ ದ್ವಿಚಕ್ರವಾಹನಗಳ ಓಡಾಟಕ್ಕೆ ಶನಿವಾರವೂ ಅನುಮತಿ ದೊರಕಲಿಲ್ಲ.

ಪಾದಚಾರಿಗಳಿಗೆ ಮಾತ್ರ ಸೇತುವೆ ಮೇಲೆ ಸಂಚಾರಕ್ಕೆ ಅವಕಾಶ ದೊರಕಿದ್ದು, ದ್ವಿಚಕ್ರವಾಹನಗಳ ಓಡಾಟಕ್ಕೆ ಅನುಮತಿಸುವಂತೆ ದ್ವಿಚಕ್ರವಾಹನ ಸವಾರರು ಸೇತುವೆ ಮುಂಭಾಗದಲ್ಲಿ ಪೊಲೀಸರನ್ನು ಒತ್ತಾಯಿಸುವ ದೃಶ್ಯ ಕಂಡು ಬಂತು. ದ್ವಿಚಕ್ರವಾಹನ ಸವಾರರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರೇಳು ದಿನಗಳಲ್ಲಿ ಸೇತುವೆ ಫಿಟ್‌ನೆಸ್ ಸರ್ಟಿಫಿಕೆಟ್ ದೊರಕಲಿದೆ. ಸೇತುವೆ ಮೇಲಿನ ರಕ್ಷಣಾಕಂಬಿಗಳು ಹಾಳಾಗಿದ್ದು ದುರಸ್ತಿಗೊಳಿಸಲಾಗುವುದು. ಫಿಟ್‌ನೆಸ್ ಸರ್ಟಿಫಿಕೆಟ್ ದೊರಕಿದ ನಂತರವೇ ದ್ವಿಚಕ್ರವಾಹನಗಳ ಸಂಚಾರಕ್ಕೆ ಅವಕಾಶ ಕೊಡಲಾಗುವುದು ಎಂದು ತಹಸೀಲ್ದಾರ್ ಗೌಸಿಯಾಬೇಗಂ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net