ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸಿ

020322 Kampli Rice Association Appeal for Bridge
ಕಂಪ್ಲಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲುಗೆ ಕಂಪ್ಲಿ ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮನವಿ ಸಲ್ಲಿಸಿದರು.
Published on

ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲುಗೆ ಪಟ್ಟಣದ ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಬುಧವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ಆರು ದಶಕಗಳ ಹಿಂದಿನ ಸೇತುವೆ ಶಿಥಿಲಗೊಂಡಿದ್ದು, ಹೊಸ ಸೇತುವೆ ನಿರ್ಮಾಣ ಅಗತ್ಯವಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನವಾಗಲಿ, ಜಿಲ್ಲಾ ಖನಿಜ ನಿಧಿಯಡಿಯಲ್ಲಾಗಲಿ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿದರು. ಸಂಘದ ಪದಾಧಿಕಾರಿಗಳಾದ ಡಿ.ವಿ.ಸುಬ್ಬಾರಾವ್, ಟಿ.ವೆಂಕಟರಮಣ, ಟಿ.ನರಸಿಂಹಲು ಇತರರಿದ್ದರು.

ವಿವಿಧ ಮನವಿ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮನವಿ ಸಲ್ಲಿಸಿ, ಎಪಿಎಂಸಿ ಉಪ ಮಾರುಕಟ್ಟೆಯನ್ನು ಸ್ವತಂತ್ರ್ಯಗೊಳಿಸುವಂತೆ, ಹತ್ತಿ, ಮೆಣಸಿನಕಾಯಿ, ಭತ್ತದ ನಕಲಿ ಬೀಜಗಳ ಹಾವಳಿ ತಡೆಯುವಂತೆ, ಕಂಪ್ಲಿಯಲ್ಲಿ ಪಿಎಲ್‌ಡಿ ಬ್ಯಾಂಕ್ ಶಾಖೆ ತೆರೆಯುವಂತೆ ಒತ್ತಾಯಿಸಿದರು. ಕೊಟ್ಟೂರು ರಮೇಶ್, ಮುರಾರಿ, ವಿರುಪಣ್ಣ ಇತರರಿದ್ದರು. ಕಂಪ್ಲಿಯಲ್ಲಿ ಬಸ್ ಡಿಪೋ ತೆರೆಯುವಂತೆ, ಕಡೇಬಾಗಿಲು ಸೇತುವೆ ಮೂಲಕ ತೆರಳುವ ಬಸ್ಸುಗಳನ್ನು ನಿಯಂತ್ರಿಸುವಂತೆ ಒತ್ತಾಯಿಸಿ ಡಾ.ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮುನ್ನಾ, ಇಂತಿಯಾಜ್, ಬಡಿಗೇರ ಜಿಲಾನ್‌ಸಾಬ್ ಇತರರು ಸೇರಿ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net