ನದಿಯಲ್ಲಿ ಮತ್ತೆ ನೀರಿನ ಏರಿಳಿಕೆ

070822 Kampli Bridge
ಕಂಪ್ಲಿ ತುಂಗಭದ್ರಾ ಸೇತುವೆ ಮಟ್ಟಕ್ಕೆ ಬಂದಿರುವ ನದಿ ನೀರು
Published on

ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿಗೆ ಮತ್ತೆ 90 ಸಾವಿರ ಕ್ಯೂಸೆಕ್ ನೀರು ಭಾನುವಾರ ಹರಿದು ಬಂತು. ನದಿಗೆ ನೀರು ಬರುವುದು ಮತ್ತು ಇಳಿಕೆ ಆಗುವುದು, ಮತ್ತೆ ನೀರು ಬರುವುದನ್ನು ಗಮನಿಸುತ್ತಿರುವ ಜನತೆಗೆ ತೋಳ ಬಂತು ತೋಳ ಎನ್ನುವಂತಾಗಿದೆ. ಜು.13ರಿಂದ ಜು.21ರತನಕ ಸೇತುವೆ ಮೇಲೆ ಪಾದಚಾರಿ ಮತ್ತು ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿತ್ತು.

ಜು.22ರಿಂದ ಕೇವಲ ದ್ವಿತ್ರಿಚಕ್ರ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಿದೆ. ಇನ್ನು ಸೇತುವೆ ಮೇಲೆ ಬಸ್‌ಗಳ ಓಡಾಟಕ್ಕೆ ಅವಕಾಶ ಇನ್ನು ದೊರೆತಿಲ್ಲ. ಮತ್ತೆ ಸೇತುವೆ ಮುಳುಗಡೆ ಭೀತಿ ಕಾಡುತ್ತಿದೆ. ಜು.22ರಿಂದಲೂ ನದಿಗೆ ನೀರು ಹರಿದು ಬರುವ ಪ್ರಮಾಣ ಏರಿಳಿಕೆಯಾಗುತ್ತಿದೆ. ಸೇತುವೆ ಮೇಲೆ ಬಸ್ಸುಗಳ ಓಡಾಟಕ್ಕೆ ಅವಕಾಶ ನಿಷೇಧಿಸಿದ್ದರಿಂದ ಪ್ರಯಾಣಿಕರು ಹೆಚ್ಚು ಹಣ ತೆತ್ತು ಕಡೆಬಾಗಿಲು ಮೂಲಕ ಸಂಚರಿಸಬೇಕಿದೆ. ಇಲ್ಲವೇ ಆಟೋ ನೆಚ್ಚಿಕೊಳ್ಳಬೇಕಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಮೀನುಗಾರರೊಗೆ ತೊಂದರೆಯಾಗಿದೆ. ನದಿಪಾತ್ರದ ಜನತೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ, ನದಿಗೆ ಇಳಿಯದಂತೆ ತಹಸೀಲ್ದಾರ್ ಗೌಸಿಯಾಬೇಗಂ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net