ಬೇಸಿಗೆ ಬೆಳೆಗೆ ನೀರು ಒದಗಿಸಿ

kmp=1
ಕಂಪ್ಲಿಯಲ್ಲಿ ಏರ್ಪಡಿಸಿದ್ದ ರೈತರ ಸಭೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿದರು. ಪ್ರಮುಖರಾದ ಭಟ್ಟ ಪ್ರಸಾದ್, ಜೆ.ಭರಮರೆಡ್ಡಿ, ಎನ್.ತಿಮ್ಮಪ್ಪನಾಯಕ, ಕೆ.ರಮೇಶ್, ಎ.ಸಿ.ದಾನಪ್ಪ, ಕೆ.ಎಂ.ಹೇಮಯ್ಯ ಸ್ವಾಮಿ ಇತರರಿದ್ದರು.
Published on

ಕಂಪ್ಲಿ: ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಕಂಪ್ಲಿ, ಕುರುಗೋಡು, ಸಿರುಗುಪ್ಪ ಹಾಗೂ ಬಳ್ಳಾರಿ ತಾಲೂಕಿನ ರೈತರು ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಬೇಸಿಗೆ ಬೆಳೆಗೆ ನೀರು ಒದಗಿಸಲು ಸರ್ಕಾರಕ್ಕೆ ಒತ್ತಾಯಿಸಿದರು.

ತುಂಗಭದ್ರಾ ಜಲಾಶಯ ವ್ಯಾಪ್ತಿಯ ರೈತರು ನೀರಿಗಾಗಿ ಸಂಘಟಿತರಾಗಬೇಕು. ಫೆ.1ರಿಂದ ಪ್ರತಿದಿನ ಕಾಲುವೆಗಳಿಗೆ 6 ಸಾವಿರ ಕ್ಯೂಸೆಕ್‌ನಂತೆ ನೀರು ಹರಿಸಿದರೂ ಕುಡಿಯಲು ನೀರು ಉಳಿಯಲಿದೆ. ಜಲಾಶಯದಲ್ಲಿ 45 ಟಿಎಂಸಿ ನೀರು ಇದ್ದಾಗ ಗೇಟ್ ಕೂಡಿಸುವ ಕಾರ್ಯ ಆರಂಭಿಸಲಿ.

ಒಂದು ಗೇಟ್ ಕೂಡಿಸಲು ನಾಲ್ಕು ದಿನ ಬೇಕಿದ್ದು, ಮೂರು ತಿಂಗಳೊಳಗೆ 33 ಗೇಟ್ ಕೂಡಿಸಬಹುದು. 80 ಟಿಎಂಸಿ ನೀರು ಇದ್ದಾಗ ಎರಡನೇ ಬೆಳೆಗೆ ನೀರು ಒದಗಿಸಿದೆ. ನ.2ರೊಳಗೆ ಮುನಿರಾಬಾದ್‌ನಲ್ಲಿ ಐಸಿಸಿ ಸಭೆ ನಡೆಸಿ ಬೇಸಿಗೆ ಬೆಳೆಗೆ ನೀರು ಬಿಡುವ ಕುರಿತು ಪ್ರಕಟಿಸಬೇಕು.

ಇಲ್ಲದಿದ್ದಲ್ಲಿ ನ.3ರಂದು ಹೆದ್ದಾರಿ ಬಂದ್ ಮಾಡಿ ಟ್ರ್ಯಾಕ್ಟರ್‌ಗಳೊಂದಿಗೆ ಬೃಹತ್ ಪ್ರತಿಭಟನೆ ಮಾಡಲಾಗುವುದು. ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಬೇಸಿಗೆ ಬೆಳೆಗೆ ಸರ್ಕಾರ ನೀರು ಒದಗಿಸುವ ಕುರಿತು ನ.3ರೊಳಗೆ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ ರೈತರು ಸಂಘಟಿತರಾಗಿ ನ.3ರಂದು ಟಿ.ಬಿ.ಡ್ಯಾಂ ಮುಂಭಾಗದ ಗಣೇಶ ಗುಡಿ ಬಳಿಯ ಹೈವೆ ರಸ್ತೆ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ದಿಶಾ ರಾಜ್ಯ ಸಮಿತಿ ಸದಸ್ಯ ಎ.ಸಿ.ದಾನಪ್ಪ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜೆ.ಭರಮರೆಡ್ಡಿ, ಪದಾಧಿಕಾರಿಗಳಾದ ವಿ.ವೀರೇಶ್, ತಿಮ್ಮಪ್ಪ ನಾಯಕ, ಕೊಟ್ಟೂರು ರಮೇಶ, ಡಿ.ಮುರಾರಿ, ಟಿ.ಗಂಗಣ್ಣ, ಕೆ.ಎಂ.ಹೇಮಯ್ಯಸ್ವಾಮಿ, ಎಂ.ಸುಧೀರ್, ಪಿ.ಸತ್ಯನಾರಾಯಣ, ಬಿ.ಎಸ್.ವೆಂಕಟಸ್ವಾಮಿ, ಡಿ.ಶ್ರೀನಿವಾಸ, ಶಿವಜಾತಗೌಡ, ವಿರುಪಾಕ್ಷರೆಡ್ಡಿ, ವೀರೇಶ್, ತಾಯಪ್ಪ, ಕಾಗೆ ಈರಣ್ಣ ಸೇರಿ ನಾನಾ ತಾಲೂಕುಗಳ ರೈತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net