

ಕಂಪ್ಲಿ: ದೇಶದಿಂದ ಭಯೋತ್ಪಾದನೆ ಹೊಡೆದೋಡಿಸುವ ಸಂಕಲ್ಪಕ್ಕೆ ನಾಗರಿಕರು ಕೈಜೋಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಎನ್.ಹಬೀಬ್ ರೆಹಮಾನ್ ಹೇಳಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಬಳ್ಳಾರಿಯಿಂದ ಆಗಮಿಸಿದ ರಾಜೀವ್ ಜ್ಯೋತಿ ಸದ್ಭಾವನ ಯಾತ್ರೆಯ ಜ್ಯೋತಿಯನ್ನು ಸ್ವಾಗತಿಸಿ ಮಾತನಾಡಿದರು.ದೇಶದಲ್ಲಿ ಸಹೋದರತೆ, ಏಕತೆ ಮೂಡಿಸುವ ಜತೆಗೆ ಭಯೋತ್ಪಾದನೆ ವಿರುದ್ಧ ಸಂದೇಶ ಸಾರಲು ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ರಾಜೀವ್ ಗಾಂಧಿ ಸದ್ಭಾವನಾ ಜ್ಯೋತಿ ಯಾತ್ರೆಗೆ ಸ್ವಾಗತ
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಮಸ್ತಾನ್‌ಸಾಬ್, ಪುರಸಭೆ ಸದಸ್ಯರಾದ ಕೆ.ಎಸ್.ಚಾಂದ್‌ಬಾಷಾ, ವೀರಾಂಜನೇಯಲು, ಲಡ್ಡುಹೊನ್ನೂರವಲಿ, ಪ್ರಮುಖರಾದ ಆಟೋ ರಾಘವೇಂದ್ರ, ಜಿ.ಸುಧಾಕರ, ಯಾಳ್ಪಿ ಅಬ್ದುಲ್ ಮುನಾಫ್, ಬಿ.ಪರಶುರಾಮಪ್ಪ, ಪ್ರಸಾದ್, ಟಿ.ಸುರೇಶರೆಡ್ಡಿ, ಅಕ್ಕಿ ಜಿಲಾನ್, ಕರೇಕಲ್ ಮನೋಹರ, ಸೈಯದ್ ಉಸ್ಮಾನ್, ಟಿ.ಜಾಫರ್, ಬಾವಿಕಟ್ಟೆ ಬಾಬು, ಸದ್ಭಾವನಾ ಯಾತ್ರೆ ಅಧ್ಯಕ್ಷ ಆರ್.ದೊರೈ, ಸದಸ್ಯ ಅಯ್ಯರ್ ಇದ್ದರು.