ಹತ್ತು ಗ್ರಾಪಂಗಳಿಂದ ಮಣ್ಣು ಸಂಗ್ರಹ

Kampli Mud
ಕಂಪ್ಲಿಯಲ್ಲಿ ನನ್ನ ಮಣ್ಣು, ನನ್ನ ದೇಶ ಅಭಿಯಾನಕ್ಕೆ ಜಿಪಂ ಯೋಜನಾ ನಿರ್ದೇಶಕ ಪ್ರಮೋದ್ ಚಾಲನೆ ನೀಡಿದರು. ತಾಪಂ ಇಒ ಆರ್.ಕೆ.ಶ್ರೀಕುಮಾರ್, ಎಡಿಎ ಕೆ.ಎಸ್.ಮಲ್ಲನಗೌಡ, ಸಹಾಯಕ ನಿರ್ದೇಶಕಿ ಅಪರಂಜಿ, ಲೆಕ್ಕಾಧಿಕಾರಿ ಕೆ.ಸುರೇಶ್ ಇತರರಿದ್ದರು.
Published on

ಕಂಪ್ಲಿ: ನನ್ನ ಮಣ್ಣು, ನನ್ನ ದೇಶ ಅಭಿಯಾನ ಆ.16ರಂದು ಆರಂಭವಾಗಿದ್ದು, ಆ.29ರವರೆಗೆ ನಡೆಯಲಿದೆ ಎಂದು ಬಳ್ಳಾರಿ ಜಿಪಂ ಯೋಜನಾ ನಿರ್ದೇಶಕ ಪ್ರಮೋದ್ ಹೇಳಿದರು.

ಇಲ್ಲಿನ ತಾಪಂ ಕಚೇರಿ ಆವರಣದಲ್ಲಿ ಶನಿವಾರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನ ಹತ್ತು ಗ್ರಾಪಂಗಳಿಂದ ಮಣ್ಣನ್ನು ಪಡೆದಿದ್ದು, ಇದನ್ನು ಅಮೃತ ಕಲಶದಲ್ಲಿ ಸಂಗ್ರಹಿಸಿ, ನೆಹರು ಯುವ ಕೇಂದ್ರದ ಮೂಲಕ ದೆಹಲಿಗೆ ಕಳಿಸಲಾಗುವುದು ಎಂದರು.

ತಾಪಂ ಇಒ ಆರ್.ಕೆ.ಶ್ರೀಕುಮಾರ್ ಮಾತನಾಡಿ, ಮಣ್ಣು ದೇಶಾಭಿಮಾನದ ಪ್ರತೀಕವಾಗಿದ್ದು, ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಒದಗಿಸಬೇಕಿದೆ ಎಂದರು.

ನರೇಗಾ ಎಡಿಎ ಕೆ.ಎಸ್.ಮಲ್ಲನಗೌಡ, ಎಡಿ ಅಪರಂಜಿ, ಬಳ್ಳಾರಿ ಜಿಪಂ ಲೆಕ್ಕಾಧಿಕಾರಿ ಕೆ.ಸುರೇಶ, ಪಿಡಿಒಗಳಾದ ಬೀರಲಿಂಗಪ್ಪ, ಹಾಲಹರವಿ ಶೇಷಗಿರಿ, ಶ್ರೀಶೈಲಗೌಡ, ಶಿಲ್ಪಾರಾಣಿ, ಸಾವಿತ್ರಿ ಕೆ.ಗೌರೋಜಿ, ಐಇಸಿ ಹನುಮೇಶ್ ಆಗಲೂರು ಹೊಸಳ್ಳಿ, ಸಂಗಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net