ಮಕ್ಕಳಿಗೆ ಮಾನವೀಯ ಮೌಲ್ಯಗಳ ಕಲಿಸಿ

Kampli Manavi
ಬುಕ್ಕಸಾಗರ ಕರಿಸಿದ್ಧೇಶ್ವರ ಸಂಸ್ಥಾನಮಠದಲ್ಲಿ ವಿಶ್ವಾರಾಧ್ಯ ಶಿವಾಚಾರ್ಯರ ಅನುಷ್ಠಾನ ಮಹಾಮಂಗಲ ಪೂಜಾ ಕಾರ್ಯಕ್ರಮ ಜರುಗಿತು.
Published on

ಕಂಪ್ಲಿ: ಸಮೀಪದ ಬುಕ್ಕಸಾಗರ ಕರಿಸಿದ್ಧೇಶ್ವರ ಸಂಸ್ಥಾನಮಠದಲ್ಲಿ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯರ 27ನೇ ವರ್ಷದ ಅನುಷ್ಠಾನ ಪೂಜಾ ಕಾರ್ಯಕ್ರಮ ಬುಧವಾರ ಮಂಗಲಗೊಂಡಿತು.

ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸಬೇಕಿದೆ. ಆಧುನಿಕತೆಯ ಭರಾಟೆಯಲ್ಲಿ ಪರಂಪರೆಯಿಂದ ಸಾಗಿ ಬಂದ ಆಚರಣೆಗಳಿಂದ ವಿಮುಖರಾಗಬಾರದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಲಿಂ.ಕರಿಸಿದ್ಧೇಶ್ವರ ಕರ್ತೃಗದ್ದುಗೆಗೆ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ವೀರಭದ್ರೇಶ್ವರ ದೇವರ ಶಾಂತಿಪೂಜೆ, ಗುಂಡಮ್ಮದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಕುಂಕುಮಾರ್ಚನೆ, ಹೂವಿನ ಅಡ್ಡಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ, ಅನ್ನಸಂತರ್ಪಣೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net