

ಕಂಪ್ಲಿ: ಇಲ್ಲಿನ ಡಾ.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಮೆಟ್ರಿಯ ಸ್ನೇಹಜೀವಿ ಸಾಮಾಜಿಕ ಸಾಂಸ್ಕೃತಿಕ ಮತ್ತು ಕ್ರೀಡಾಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಿತು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಶಾಲಾ ಮಕ್ಕಳಲ್ಲಿ ರಂಗಕಲೆಯನ್ನು ಪ್ರೇರೇಪಿಸಬೇಕಿದೆ. ಮೊಬೈಲ್ ಗೀಳು ಬಿಡಿಸಿ ಶಾಸ್ತ್ರೀಯ ರಂಗಕಲೆ ಕಲಿಸಬೇಕಿದೆ ಎಂದರು.
ಕ್ರೀಡಾ ಸಂಘದ ಸಂಘಟಕ ಕೆ.ಶಂಕರ ಮೆಟ್ರಿ ಮಾತನಾಡಿ, ಆಧುನಿಕತೆಯ ಸೋಂಕಿನಿಂದಾಗಿ ರಂಗಭೂಮಿ ಕಲೆ ಕಣ್ಮರೆಯಾಗುತ್ತಿದ್ದು, ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಜಾಗ್ರತೆವಹಿಸಬೇಕು ಎಂದರು.
ಕೆ.ಶಂಕರ ಮೆಟ್ರಿ ತಂಡದಿಂದ ಕಂಸಾಳೆ ನೃತ್ಯ, ವೈ.ಮಂಜುನಾಥ ತಂಡದಿಂದ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನಗೊಂಡಿತು. ಪ್ರಮುಖರಾದ ಕೆ.ಹೇಮೇಶ್ವರ, ಚಂದ್ರಶೇಖರ, ಚನ್ನಕೇಶವ, ಡಿ.ಮಹೇಶಬಾಬು, ಚಂದ್ರಪ್ಪ ಕಂಬಳಿ, ಪಂಪಾಪತಿ ಕೋಡಲು, ಕೆ.ನಾಗರಾಜ, ಕೆ.ರಮೇಶ ಇತರರಿದ್ದರು.