ತಗ್ಗಿದ ನೀರಿನ ಹರಿವು, ಮುಳುಗಡೆಯಾಗಿದ್ದ ಕಂಪ್ಲಿ-ಗಂಗಾವತಿ ಸೇತುವೆ ಮುಕ್ತ

27072021 Kampli Tungabhdra brigde1
Published on

ಕಂಪ್ಲಿ: ಟಿಬಿ ಡ್ಯಾಂ ಹೊರಹರಿವು ತಗ್ಗಿದ್ದರಿಂದ ಕಂಪ್ಲಿ-ಗಂಗಾವತಿ ಸೇತುವೆ ಮಂಗಳವಾರ ನೀರಿನಿಂದ ಮುಕ್ತವಾಗಿದೆ. ಆದಾರೂ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಸೋಮವಾರ 1.40 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ಸೇತುವೆ ಮುಳುಗಿತ್ತು. ಇದರಿಂದ ರಕ್ಷಣಾ ಕಂಬಿಗಳು ಜಖಂ ಆಗಿವೆ. ರಸ್ತೆ ಮೇಲಿನ ಜಾಯಿಂಟ್‌ಗಳಲ್ಲಿನ ಸಿಮೆಂಟ್ ಕಿತ್ತು ಹೋಗಿದೆ. ಅಡರಿದ್ದ ಜಲಸಸ್ಯಗಳನ್ನು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವಿ.ಸುದರ್ಶನರೆಡ್ಡಿ ಸಮ್ಮುಖದಲ್ಲಿ ಪೌರ ಕಾರ್ಮಿಕರು ಮಂಗಳವಾರ ತೆರವುಗೊಳಿಸಿದರು. ರಕ್ಷಣಾ ಕಂಬಿಗಳ ಉದ್ದಕ್ಕೂ ಬಿಎಸ್‌ಎನ್‌ಎಲ್ ಅಳವಡಿಸಿದ್ದ ಹುಬ್ಬಳ್ಳಿ-ಕರ್ನೂಲ್ 100 ಜಿಬಿ ಸಂಪರ್ಕ ಲೈನ್ ಜಖಂಗೊಂಡಿದ್ದು, ಹೊಸಪೇಟೆ ಬಿಎಸ್‌ಎನ್‌ಎಲ್ ಎಇ ತಾಹೀರ್‌ಖಾನ್ ನೇತೃತ್ವದ ತಂಡ ಸರ್ವೇ ಮಾಡಿತು. ನದಿ ನೋಡಲು ಜನ ತಂಡ ತಂಡವಾಗಿದ್ದು ಆಗಮಿಸುತ್ತಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹೈರಾಣಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net