ವಿದ್ಯಾರ್ಥಿಗಳಿಗೆ ಸಮವಸ್ತ್ರ ಕೊಡಿಸಿದ ಮಂಗಳಮುಖಿ

kam-1
ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿಯ ಶಾರದಾ ನಗರದ ಸಕಿಪ್ರಾ ಶಾಲೆ ಮಕ್ಕಳಿಗೆ ಮಂಗಳಮುಖಿ ರಾಜಮ್ಮ ಸ್ವಂತ ವೆಚ್ಚದಲ್ಲಿ ಪ್ಯಾಂಟ್, ಟೀಶರ್ಟ್ ವಿತರಿಸಿದರು. ಪ್ರಮುಖರಾದ ಭೂಮೇಶ್ವರ್, ಲೋಕೇಶ್, ಷರೀಫ್‌ಸಾಬ್, ರಂಜಾನ್‌ಸಾಬ್ ಇತರರಿದ್ದರು.
Published on

ಕಂಪ್ಲಿ: ಪಟ್ಟಣದ ಮಂಗಳಮುಖಿ ರಾಜಮ್ಮ ಭಿಕ್ಷೆ ಬೇಡಿ ಉಳಿತಾಯ ಮಾಡಿದ ಹಣದಲ್ಲಿ ಸುಗ್ಗೇನಹಳ್ಳಿಯ ಎರಡು ಸರ್ಕಾರಿ ಶಾಲೆ ಮಕ್ಕಳಿಗೆ ಬುಧವಾರ ಸಮವಸ್ತ್ರ ಕೊಡಿಸಿದ್ದಾರೆ.

ಸುಗ್ಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾರದಾ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಒಟ್ಟು 150 ಮಕ್ಕಳಿಗೆ 60 ಸಾವಿರ ರೂ. ಮೌಲ್ಯದ ಟಿ ಶರ್ಟ್, ಪ್ಯಾಂಟ್‌ಗಳನ್ನು ನೀಡಿದ್ದಾರೆ.

ಮಂಗಳಮುಖಿ ರಾಜಮ್ಮ ಮಾತನಾಡಿ, ಭಿಕ್ಷೆ ಬೇಡಿದ ಹಣದಲ್ಲಿ ಉಳಿತಾಯ ಮಾಡಿ, ಬಡ ಮಕ್ಕಳಿಗೆ ಸಹಾಯ ಮಾಡುವ ಇಚ್ಛೆಯಿಂದ ಬಟ್ಟೆ ಕೊಡಿಸಿದ್ದೇನೆ. ದಾನ-ಧರ್ಮ, ಪುಣ್ಯ-ಪರೋಪಕಾರಗಳಲ್ಲಿ ತೊಡಗಿಸಿಕೊಳ್ಳುವುದು ಮಾನವ ಧರ್ಮ.

ಕಳೆದ ವರ್ಷವೂ ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ ನೀಡಿದ್ದಾಗಿ ತಿಳಿಸಿದರು.

ಸುಗ್ಗೇನಹಳ್ಳಿ ಗ್ರಾಪಂ ಅಧ್ಯಕ್ಷ ಲೋಕೇಶ್, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ, ಇಸಿಒ ಎಂ.ರೇವಣ್ಣ, ಸಿಆರ್‌ಪಿ ಭೂಮೇಶ್ವರ್, ಮುಖ್ಯಶಿಕ್ಷಕಿ ಫಿರ್ದೋಶ್‌ಬಾನು, ಪ್ರಮುಖರಾದ ಷರೀಫ್‌ಸಾಬ್, ರಂಜಾನ್‌ಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net