ಕಂಪ್ಲಿ ಠಾಣೆ ಪೇದೆಗೆ ಕರೊನಾ ಸೋಂಕು, 51 ಸಿಬ್ಬಂದಿ ಹೋಂ ಕ್ವಾರಂಟೈನ್

Kampli Police Quarters Seal Down
ಕಂಪ್ಲಿಯ ಪೊಲೀಸ್ ವಸತಿ ಗೃಹಗಳಿಗೆ ಪುರಸಭೆ ಪೌರ ಕಾರ್ಮಿಕರು ಶನಿವಾರ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದರು.
Published on

ಕಂಪ್ಲಿ: ಪೇದೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಸೀಲ್‌ಡೌನ್ ಮಾಡಲಾಗಿದೆ. 51 ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಪ್ರಥಮ ಸಂಪರ್ಕದಲ್ಲಿದ್ದ ಹಿರಿಯ ಅಧಿಕಾರಿ ಸೇರಿ 8 ಜನರನ್ನು ಪತ್ತೆ ಹಚ್ಚಿ ಹೊಸಪೇಟೆಯ ಲಾಡ್ಜ್‌ವೊಂದರ ಕ್ವಾರಂಟೈನ್‌ಲ್ಲಿಡಲಾಗಿದೆ. ಪೊಲೀಸ್ ಕ್ವಾರ್ಟಸ್, ಸ್ಟೇಷನ್‌ಗೆ ಸ್ಯಾನಿಟೈಸೇಷನ್ ಮಾಡಲಾಗಿದೆ.

ಕೊಟ್ಟೂರಲ್ಲಿ ಮತ್ತೊಂದು ಪ್ರಕರಣ: ಪಟ್ಟಣದ 21 ವರ್ಷದ ಯುವಕನಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ಐದಕ್ಕೆ ಏರಿದೆ. ಲೋಕಿಕೆರೆಯ ಸೋಂಕಿತನ ಜತೆ ತಿರುಗಾಡಿದ್ದರಿಂದ ಈತನಿಗೆ ಸೋಂಕು ತಗುಲಿದೆ. ಬಳ್ಳಾರಿ ಕೊವೀಡ್-19 ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವಕನ ದ್ವಿತೀಯ ಸಂಪರ್ಕದಲ್ಲಿದ್ದ 6 ಜನರನ್ನು ತೋರಣಗಲ್ ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಪಟ್ಟಣದ ಉಜ್ಜಿನಿ ರಸ್ತೆಯಲ್ಲಿರುವ ಹುಡುಗನ ಮನೆ ಸುತ್ತಲಿನ ಪ್ರದೇಶ ಸೀಲ್‌ಡೌನ್ ಮಾಡಲಾಗಿದೆ. ತಹಸೀಲ್ದಾರ್ ಅನಿಲ್ ಕುಮಾರ್, ಪಪಂ ಮುಖ್ಯಾಧಿಕಾರಿ ಎಚ್.ಎಫ್.ಬಿದರಿ, ಟಿಎಚ್‌ಒ ಡಾ.ಷಣ್ಮುಖ ನಾಯ್ಕ ಇತರರು ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net