

ಕಂಪ್ಲಿ: ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾ ಕೌಶಲ ಬೆಳೆಸಿಕೊಳ್ಳಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷೆ ಹೇಮಾವತಿ ಎಚ್.ಪೂರ್ಣಚಂದ್ರ ಹೇಳಿದರು.
ಇಲ್ಲಿನ ಸಕ್ಕರೆ ಕಾರ್ಖಾನೆಯ ವಿಜಯ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಆರಂಭಗೊಂಡ ವಲಯ-2ರ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಕ್ರೀಡಾಜ್ಯೋತಿ ಬೆಳಗಿ ಮಾತನಾಡಿದರು. ಪಠ್ಯ ಚಟುವಟಿಕೆಗಳೊಂದಿಗೆ ನಿತ್ಯ ನಿರಂತರ ಕ್ರೀಡಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ರೀಡಾಕೂಟದ ಅಧ್ಯಕ್ಷ ಎಂ.ರೇವಣ್ಣ ಮಾತನಾಡಿ, ವೈಯಕ್ತಿಕ ಕ್ರೀಡೆಗಳಲ್ಲಿ 25 ಶಾಲೆ, ಗುಂಪು ಕೂಟದಲ್ಲಿ 20 ಶಾಲೆಗಳ ಒಟ್ಟು 600 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
ಕ್ರೀಡಾಕೂಟದ ಕಾರ್ಯದರ್ಶಿಗಳಾದ ಎಚ್.ಜಡೆಪ್ಪ, ಕೆ.ವೀರೇಶ್, ತಾಲೂಕು ಸಮನ್ವಯ ಅಧಿಕಾರಿ ಕೆ.ಶಿವಕುಮಾರ್, ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಇಸಿಒ ಜಿ.ವೀರೇಶ್, ಸಿಆರ್‌ಪಿ ಭೂಮೇಶ್ವರ್, ವೀರೇಶ್, ಪದಾಧಿಕಾರಿಗಳಾದ ಎಂ.ಎ.ನಾಗನಗೌಡ, ಎಚ್.ದೊಡ್ಡಬಸಪ್ಪ, ರಾಜೇಶ್ವರಿ, ಸುನೀತಾ, ಜೋಗಿ ನಾಯಕ ರುದ್ರಪ್ಪ, ಮುಖ್ಯಶಿಕ್ಷಕ ಎಂ.ಎನ್.ರಾಜಣ್ಣ ಇತರರಿದ್ದರು.