ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆ

Kampli Dasara Sports
ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾದ ಕಂಪ್ಲಿಯ ಯಕ್ಷ ಯೋಗ ಕೇಂದ್ರದ ವಿದ್ಯಾರ್ಥಿಗಳು. ತರಬೇತುದಾರರಾದ ಎಂ.ಶ್ಯಾಮಲಾ, ವೈ.ವಿಜಯಲಕ್ಷ್ಮೀ, ತೀರ್ಪುಗಾರರಾದ ಸಂಜಯಸ್ವಾಮಿ, ಮುದ್ದೆಗೌಡ್ರು ಇದ್ದಾರೆ.
Published on

ಕಂಪ್ಲಿ: ಬಳ್ಳಾರಿಯಲ್ಲಿ ಆಯೋಜಿಸಿದ್ದ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಇಲ್ಲಿನ ಯಕ್ಷ ಯೋಗ ಕೇಂದ್ರದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವೈ.ಎಸ್.ಯೋಗೇಶ್, ಕಲಾತ್ಮಕ ಸಿಂಗಲ್ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನ, ಸಾಂಪ್ರದಾಯಿಕ ಯೋಗಾಸನದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಕಲಾತ್ಮಕ ಮತ್ತು ರಿದಮಿಕ್ ಜೋಡಿ ಯೋಗಾಸನಾದಲ್ಲಿ ಎಸ್.ಗೌತಮಿ, ಎಸ್.ಭೂಮಿಕಾ ಚಿನ್ನ, ರಿದಮಿಕ್ ಯೋಗಾಸನಾ ಸ್ಪರ್ಧೆಯಲ್ಲಿ ಮಣಿಕಂಠ, ಶಶಾಂಕ್ ಬೆಳ್ಳಿ ಪದಕಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.

ಎಸ್.ಪೂಜಾ, ಅನನ್ಯಾ ಪವರ್ ತೃತೀಯ ಸ್ಥಾನಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ತರಬೇತುದಾರರಾದ ಎಂ.ಶ್ಯಾಮಲಾ, ವೈ.ವಿಜಯಲಕ್ಷ್ಮೀ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net