ಬಿಇಒ ಕಚೇರಿ-ಬಸ್ ಡಿಪೋ ಆರಂಭಿಸಿ

Kmp-2
ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಪದಾಧಿಕಾರಿಗಳು ಕಂಪ್ಲಿಯಲ್ಲಿ ಶಾಸಕ ಜೆ.ಎನ್.ಗಣೇಶ್‌ಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಬಿ.ಗಂಗಾಧರ, ಎಸ್.ಎ.ಖಾದ್ರಿ, ಗುಬಾಜಿ ರಾಮಾಂಜಿನಿ, ಶ್ರೀನಿವಾಸ್, ಬಿ.ಶಂಕರ್ ಇತರರಿದ್ದರು.
Published on

ಕಂಪ್ಲಿ: ಕೆರೆ ಅಭಿವೃದ್ಧಿ, ಬಸ್ ಡಿಪೋ ಆರಂಭ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಗುರುವಾರ ಶಾಸಕ ಜೆ.ಎನ್.ಗಣೇಶ್‌ಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಬಿ.ಗಂಗಾಧರ ಮಾತನಾಡಿ, ತಾಲೂಕಿನ ಖಾಸಗಿ ಶಾಲೆಗಳಲ್ಲಿ ಸರ್ಕಾರದ ಆದೇಶ ಮೀರಿ ಅಧಿಕ ಶುಲ್ಕ ಪಡೆಯಲಾಗುತ್ತಿದ್ದು, ಹತೋಟಿಗೆ ತರಬೇಕು.

ತಾಲೂಕಿನಲ್ಲಿ ಕೂಡಲೇ ಬಿಇಒ ಕಚೇರಿ ಆರಂಭಿಸಬೇಕು. ಸಾರಿಗೆ ಬಸ್ ಡಿಪೋ ಆರಂಭಿಸಬೇಕು. ತಾಲೂಕಿನ ರಾಮಸಾಗರ ಗ್ರಾಮದ ವಿಠ್ಠಲಾಪುರ, ಗೌರಮ್ಮ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಮಿತಿ ಉಪಾಧ್ಯಕ್ಷ ಎಸ್.ಎ.ಖಾದ್ರಿ, ತಾಲೂಕು ಅಧ್ಯಕ್ಷ ಗುಬಾಜಿ ರಾಮಾಂಜಿನಿ, ಪದಾಧಿಕಾರಿಗಳಾದ ಶ್ರೀನಿವಾಸ್, ಬಿ.ಶಂಕರ್, ಬಿ.ನೀಲಪ್ಪ, ವಿ.ರಾಘವೇಂದ್ರ, ಗೋವಿಂದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net