ಪರಿಷ್ಕೃತ ವೇತನದಂತೆ ಆರ್ಥಿಕ ಸೌಲಭ್ಯ ಕಲ್ಪಿಸಿ

Kampli Retired Govt Employees manavi
ಕಂಪ್ಲಿಯಲ್ಲಿ ಶಾಸಕ ಜೆ.ಎನ್.ಗಣೇಶ್‌ಗೆ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಎಂ.ಎಸ್.ಗಂಗಾಧರಯ್ಯ, ಪದಾಧಿಕಾರಿಗಳಾದ ಟಿ.ಶಶಿಧರ, ವಿ.ನಾರಾಯಣರೆಡ್ಡಿ, ಬಿ.ಬೆಟ್ಟಪ್ಪ, ಬಿ.ವೀರೇಶಪ್ಪ ಇತರರಿದ್ದರು.
Published on

ಕಂಪ್ಲಿ: ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಪದಾಧಿಕಾರಿಗಳು ಶುಕ್ರವಾರ ಶಾಸಕ ಜೆ.ಎನ್.ಗಣೇಶ, ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖಗೆ ಮನವಿ ಸಲ್ಲಿಸಿದರು.

ಏಳನೇ ವೇತನ ಆಯೋಗದ ಅನುಷ್ಠಾನದಲ್ಲಿ 2022ರ ಜು.1ರಿಂದ 2024ರ ಜು.31ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ಒದಗಿಸಬೇಕು. ಡಿಸಿಆರ್‌ಜಿ, ಕಮ್ಯೂಟೇಷನ್, ಇಎಲ್ ಎನ್‌ಕ್ಯಾಶ್‌ಮೆಂಟ್ ಲೆಕ್ಕಾಚಾರ ಮಾಡದೆ ಹಳೆಯ ವೇತನ ಶ್ರೇಣಿಯ ಮೇಲೆಯೇ ಪರಿಗಣಿಸಿದಲ್ಲಿ ನಿವೃತ್ತಿ ನೌಕರರಿಗೆ ಅನ್ಯಾಯವಾಗುತ್ತದೆ. ಆದಕಾರಣ, ಪರಿಷ್ಕೃತ ಮೂಲ ವೇತನದ ಮೇಲೆ ಆರ್ಥಿಕ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಟಿ.ಶಶಿಧರ, ವಿ.ನಾರಾಯಣರೆಡ್ಡಿ, ಬಿ.ಬೆಟ್ಟಪ್ಪ,
ಬಿ.ವೀರೇಶಪ್ಪ, ವಿ.ಪಕ್ಕೀರಪ್ಪ, ಸಿ.ಚನ್ನಬಸಪ್ಪ, ಅಮರೇಶ್ವರ, ದ್ರೌಪದಿ, ಉಮಾದೇವಿ, ಅನ್ನಪೂರ್ಣ, ಬಿ.ಚಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net