ಸಿದ್ಧಲಿಂಗ ಜಗದ್ಗುರುಗಳ ಪುಣ್ಯಸ್ಮರಣೋತ್ಸವ

310122 Kampli Siddalinga puṇyasmaraṇōtsava
ಕಂಪ್ಲಿಯ ಗುರುಮಠದಲ್ಲಿ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಹಾಗೂ ಗೊಗ್ಗ ಬಸಯ್ಯನವರ ಪುಣ್ಯಸ್ಮರಣೋತ್ಸವ ಜರುಗಿತು.
Published on

ಕಂಪ್ಲಿ: ಬಾಲತಪಸ್ವಿ ಶ್ರೀಉಜ್ಜಿಯಿನಿ ಸಿದ್ಧಲಿಂಗ ಜಗದ್ಗುರುಗಳ ತಪೋಶಕ್ತಿಯೇ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಸದಾ ಕ್ರಿಯಾಶೀಲತೆಗೆ ಕಾರಣವಾಗಿದೆ ಎಂದು ಗುರುಮಠದ ಟ್ರಸ್ಟಿ ಗೊಗ್ಗ ಚನ್ನಬಸವರಾಜ ಹೇಳಿದರು.

ಸ್ಥಳೀಯ ಗುರುಮಠದಲ್ಲಿ ಸೋಮವಾರ ಬಾಲತಪಸ್ವಿ ಶ್ರೀಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಹಾಗೂ ಗೊಗ್ಗ ಬಸಯ್ಯನವರ 38ನೇ ಪುಣ್ಯಸ್ಮರಣೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಬಳ್ಳಾರಿಯಲ್ಲಿ ಶೈಕ್ಷಣಿಕ ಕ್ರಾಂತಿಗಾಗಿ 1917ರಲ್ಲಿ ಉಜ್ಜಿಯಿನಿ ಸಿದ್ಧಲಿಂಗ ಜಗದ್ಗುರುಗಳು ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪನೆಗೆ ಕಾರಣಕರ್ತರಾದರು. ಜನತೆಯಲ್ಲಿ ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಕಂಪ್ಲಿಯ ಗೊಗ್ಗ ಬಸಯ್ಯನವರ ಸಮಯಪ್ರಜ್ಞೆ, ಪ್ರಾಮಾಣಿಕತೆ, ಶೈಕ್ಷಣಿಕ ಕಾಳಜಿ ಅನುಕರಣೀಯವಾದದ್ದು ಎಂದು ಹೇಳಿದರು.

ಉಜ್ಜಿಯಿನಿ ಸಿದ್ಧಲಿಂಗ ಜಗದ್ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಗೊಗ್ಗ ಬಸಯ್ಯನವರ ಗದ್ದುಗೆಗೆ ಅಭಿಷೇಕ ಸೇರಿ ನಾನಾ ಪೂಜಾ ಕಾರ್ಯಕ್ರಮಗಳು ಜರುಗಿದವು. ಪ್ರಮುಖರಾದ ಗೊಗ್ಗ ಶಾಂತಮ್ಮ, ಗೊಗ್ಗ ಕಾರ್ತೀಕಸ್ವಾಮಿ, ಗೊಗ್ಗ ಬಸವಕುಮಾರ್, ಎಚ್.ಸಿದ್ಧಲಿಂಗಯ್ಯಸ್ವಾಮಿ, ಶಾರದಾ ಸುವಿ, ಚನ್ನಮ್ಮ, ಅಯೋಧ್ಯೆಯ ಎಚ್.ಎಂ.ಅಕ್ಕನಾಗಮ್ಮ, ಎಸ್.ಎಸ್.ಎಂ.ಚನ್ನಬಸವರಾಜ, ಕೆ.ಎಂ.ಚಂದ್ರಶೇಖರಶಾಸ್ತ್ರಿ, ಜಡೇಶ್, ಯೋಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net