ಜೋಡಿ ರಥೋತ್ಸವದ ಕಳಸಗಳ ಮೆರವಣಿಗೆ

281122 Kampli Kalasa Meravanige
ಕಂಪ್ಲಿಯ ಪೇಟೆಬಸವೇಶ್ವರ ನೀಲಮ್ಮನವರ ಜೋಡಿ ರಥೋತ್ಸವ ನಿಮಿತ್ತ ಕಳಸಗಳ ಮೆರವಣಿಗೆ ಸೋಮವಾರ ಜರುಗಿತು.
Published on

ಕಂಪ್ಲಿ: ಪಟ್ಟಣದ ಆರಾಧ್ಯದೈವ ಶ್ರೀಪೇಟೆ ಬಸವೇಶ್ವರ ನೀಲಮ್ಮನವರ ಜೋಡಿ ರಥೋತ್ಸವ ಡಿ.2ರಂದು ಜರುಗಲಿದ್ದು, ಈ ನಿಮಿತ್ತ ಸೋಮವಾರ ಕಳಸ ಧಾರಣೆ, ಕಂಕಣ ಧಾರಣೆ ಕಾರ್ಯಕ್ರಮಗಳು ಶ್ರದ್ಧೆ, ಭಕ್ತಿಯಿಂದ ಜರುಗಿದವು.

ಬಸವಣ್ಣನ ಕಳಸದ ಭಕ್ತಿಸೇವೆಯನ್ನು ವಾಲಿ ಕೊಟ್ರಪ್ಪ, ನೀಲಮ್ಮನ ಕಳಸದ ಭಕ್ತಿಸೇವೆಯನ್ನು ಗುರು ಪ್ರಸಾದ್ ಮೆಡಿಕಲ್ಸ್, ಕಂಕಣ ಧಾರಣೆಯ ಭಕ್ತಿಸೇವೆಯನ್ನು ಡಿ.ವೀರಪ್ಪ ಸ್ವೀಕರಿಸಿದರು. ಜೋಡಿ ಕಳಸಗಳ ಮೆರವಣಿಗೆ ನಡೆಸಿ, ರಥಗಳಿಗೆ ಅಳವಡಿಸಲಾಯಿತು.

ಪೇಟೆಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಿ.ವೀರಪ್ಪ ಮಾತನಾಡಿ, ನ.30ರಂದು ವಿವಾಹ ಮಹೋತ್ಸವ, ಡಿ.1ರಂದು ಹೂವಿನ ಅಡ್ಡಪಲ್ಲಕ್ಕಿ, ಡಿ.2ರಂದು ಬೆಳಿಗ್ಗೆ 10ಗಂಟೆಗೆ ಶಾರದಾ ಶಾಲೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ, ಸಂಜೆ 5 ಗಂಟೆಗೆ ಜೋಡಿ ರಥೋತ್ಸವ ಜರುಗಲಿದೆ ಎಂದರು.

ಪದಾಧಿಕಾರಿಗಳಾದ ಬಂಡೆಯ್ಯಸ್ವಾಮಿ, ಯು.ಎಂ.ವಿದ್ಯಾಶಂಕರ್, ಅರವಿ ಅಮರೇಶಗೌಡ, ಮಣ್ಣೂರು ನವೀನ್, ಎಚ್.ಎಸ್.ವೀರೇಶ್, ವಾಲಿ ಕೊಟ್ರಪ್ಪ, ಎಸ್.ಡಿ.ಬಸವರಾಜ್, ಸಣ್ಣ ಗವಿಸಿದ್ದಪ್ಪ, ಎಚ್.ನಾಗರಾಜ್, ದಾನಶೆಟ್ಟಿ ಶಿವನಾಗಪ್ಪ, ಪುಟ್ಟಿ ಬಸವನಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net