ಡಿ.22ರಿಂದ ಶ್ರೀ ಲಕ್ಷ್ಮೀ ವೆಂಕಟರಮಣ ಕಲ್ಯಾಣ ಬ್ರಹ್ಮೋತ್ಸವ

Kampli Naryanaya vidybarati sree
ನಾರಾಯಣ ವಿದ್ಯಾಭಾರತಿ ಶ್ರೀಗಳು
Published on

ಕಂಪ್ಲಿ: ಇಲ್ಲಿನ ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀಮನ್ನಾರಾಯಣಾಶ್ರಮದಿಂದ ಡಿ.22ರಿಂದ ಡಿ.27ರತನಕ ಲೋಕಕಲ್ಯಾಣಾರ್ಥ 40ನೇ ವರ್ಷದ ಶ್ರೀ ಲಕ್ಷ್ಮೀ ವೆಂಕಟರಮಣ ಕಲ್ಯಾಣ ಬ್ರಹ್ಮೋತ್ಸವ ಜರುಗಲಿದೆ.

ಡಿ.22ರಂದು ಮಹಾಗಣಪತಿ ಪೂಜೆ, ಪುಣ್ಯಾಹವಾಚನ, ಕಂಕಣಧಾರಣೆ, ಮಹಾಭಿಷೇಕ, ಶ್ರೀಮನ್ಮಹಾಗಣಪತಿ ಸಮೇತ ಮೃತ್ಯುಂಜಯ ಹೋಮ, ಡಿ.23ರಂದು ಮಹಾಭಿಷೇಕ, ಶ್ರೀ ಸೂಕ್ತ, ಪುರುಷಸೂಕ್ತ ಹೋಮ, ಡಿ.24ರಂದು ಹನುಮದ್‌ವ್ರತ, ನವಗ್ರಹ ಹೋಮ, ಡಿ.25ರಂದು ಶ್ರೀದೇವಿ ಹೋಮ, ಡಿ.26ರಂದು ಶ್ರೀಲಕ್ಷ್ಮೀ ನಾರಾಯಣ ಹೋಮ, ಬೆಳಗ್ಗೆ 10.30ಕ್ಕೆ ಲಕ್ಷ್ಮೀ ವೆಂಕಟರಮಣ ಕಲ್ಯಾಣ ಬ್ರಹ್ಮೋತ್ಸವ, ಮಧ್ಯಾಹ್ನ 12ಕ್ಕೆ ಬ್ರಹ್ಮರಥೋತ್ಸವ, ಅನ್ನಸಂತರ್ಪಣೆ, ಸಂಜೆ 6.30ಕ್ಕೆ ರಥೋತ್ಸವ, ಡಿ.27ರಂದು ಅವಭೃತಸ್ನಾನ, ಶ್ರೀಸತ್ಯನಾರಾಯಣ ಪೂಜೆಯೊಂದಿಗೆ ಸಂಪನ್ನಗೊಳಿಸಲಾಗುವುದು.

ಪ್ರತಿದಿನ ಸಂಜೆ 7.30ಕ್ಕೆ ಪಲ್ಲಕ್ಕಿ ಸೇವೆ ಇದ್ದು, ಭಕ್ತರು ಶ್ರದ್ಧೆಭಕ್ತಿಗಳಿಂದ ಪಾಲ್ಗೊಳ್ಳಬೇಕು ಎಂದು ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net