ಕೆ.ಮಲ್ಲಿಕಾರ್ಜುನ ರಾಷ್ಟ್ರೀಯ ಪವರ್ ಲಿಫ್ಟಿಂಗ್‌ಗೆ ಆಯ್ಕೆ

Power Lifter K Mallikarjuna
ಕುಮುಟಾದಲ್ಲಿ ಜರುಗಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 74ಕೆಜಿ ಮಾಸ್ಟರ್ ವಿಭಾಗದಲ್ಲಿ ಕಂಪ್ಲಿ ತಾಲೂಕಿನ ಚಿಕ್ಕಜಾಯಿಗನೂರು ಗ್ರಾಮದ ಕ್ರೀಡಾಪಟು ಪಾಲ್ಗೊಂಡ ದೃಶ್ಯ.
Published on
  • ಕಂಪ್ಲಿ: ತಾಲೂಕಿನ ಚಿಕ್ಕಜಾಯಿಗನೂರು ನಿವಾಸಿ ಪವರ್ ಲಿಫ್ಟಿಂಗ್ ಕ್ರೀಡಾಪಟು ಕೆ.ಮಲ್ಲಿಕಾರ್ಜುನ ಮೋದಲ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರೆ. ಕುಮಟಾದಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ 74ಕೆಜಿ ಮಾಸ್ಟರ್ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತರಾಗಿ, ಜು.13ರಿಂದ ಆಂಧ್ರಪ್ರದೇಶದ ರಾಜಮ್‌ನಲ್ಲಿ ಜರುಗುವ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆಗೊಂಡಿದ್ದಾರೆ.

ಹೊಸಪೇಟೆಯ ಅಂತರಾಷ್ಟ್ರೀಯ ಪದಕ ವಿಜೇತ ಪವರ್ ಲಿಫ್ಟರ್ ವಲಿಬಾಷ ಹತ್ತಿರ ತರಬೇತಿ ಪಡೆದಿದ್ದಾರೆ. ಕೆ.ಮಲ್ಲಿಕಾರ್ಜುನ ಸದ್ಯ ಹೊಸಬೆಳಕು ಎನ್‌ಜಿಒ ಸಂಸ್ಥೆಯ ಕೊಪ್ಪಳ ಜಿಲ್ಲಾ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಮೈಸೂರು, ದಾವಣಗೆರೆಯಲ್ಲಿ ಜರುಗಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದರು.

ಮಲ್ಲಿಕಾರ್ಜುನ ಪುತ್ರಿ 13ವರ್ಷದ ಎಂ.ಎ.ಜನನಿಯು ಹೊಸಪೇಟೆಯ ಶ್ರೀಚೇತನ ಶಾಲೆಯಲ್ಲಿ 8ನೇತರಗತಿ ಅಭ್ಯಾಸಿಸುತ್ತಿದ್ದು, ತಂದೆಯ ಪ್ರೋತ್ಸಾಹ, ಪ್ರೇರಣೆಯಿಂದ ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾಳೆ. ಕರಾಟೆ ಬ್ಲಾಕ್ ಬೆಲ್ಟ್ ಆಗಿದ್ದು. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾಳೆ. ತಂದೆಯೊಡನೆ 2023ರ ಮಾರ್ಚ್ ಕುಮುಟಾದಲ್ಲಿ ಜರುಗಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸಬ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತಳಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net