

ಕಂಪ್ಲಿ: ಕ್ರೀಡೆಗಳಲ್ಲಿ ಸೋಲು-ಗೆಲುವಿಗಿಂತ ಪಾಲ್ಗೊಳ್ಳುವುದು ಮುಖ್ಯ ಎಂದು ತಹಸೀಲ್ದಾರ್ ಎಸ್.ಶಿವರಾಜ ಹೇಳಿದರು.
ಇಲ್ಲಿನ ಸತ್ಯನಾರಾಯಣಪೇಟೆ ಸರ್ಕಾರಿ ಹಿಪ್ರಾ ಶಾಲಾ ಮೈದಾನದಲ್ಲಿ ಕುರುಗೋಡು ಬಿಇಒ ಕಚೇರಿಯ 2024ನೇ ಸಾಲಿನ ವಲಯ-1ರ ಕಂಪ್ಲಿ ವಲಯ ಮಟ್ಟದ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾಪಟುಗಳು ಉತ್ಸಾಹ, ಕ್ರೀಡಾಸ್ಫೂರ್ತಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಪಾರದರ್ಶಕ ನಿರ್ಣಯ ನೀಡುವಲ್ಲಿ ತೀರ್ಪುಗಾರರು ಜಾಗ್ರತೆ ತೋರಬೇಕು. ಇದರಿಂದ ಅರ್ಹ ಕ್ರೀಡಾಪಟುಗಳು ಮುಂದಿನ ಹಂತದ ಕ್ರೀಡೆಗಳಲ್ಲಿ ಜಯಗಳಿಸಲು ಅನುಕೂಲವಾಗುತ್ತದೆ ಎಂದರು.
ವಲಯ-1ರ 30 ಶಾಲೆಗಳ 1500 ವಿದ್ಯಾರ್ಥಿಗಳು ಆರು ವೈಯಕ್ತಿಕ ಮತ್ತು ಗುಂಪು ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರು. ಇಸಿಒ ಜಿ.ವೀರೇಶ್ ಅಧ್ಯಕ್ಷತೆವಹಿಸಿದ್ದರು. ಕ್ರೀಡಾ ಕಾರ್ಯದರ್ಶಿ ವೆಂಕಟರಮಣ, ಪ್ರಮುಖರಾದ ಪಿ.ನಾಗೇಶ್ವರರಾವ್, ಟಿ.ಎಂ.ಬಸವರಾಜ, ಎಂ.ಎ.ನಾಗನಗೌಡ, ಹನುಮಂತಪ್ಪ, ಎಚ್.ದೊಡ್ಡಬಸಪ್ಪ, ಮಂಜುನಾಥ, ಎಂ.ರೇವಣಸಿದ್ದೇಶ್ವರ, ಅಶೋಕ ರೆಡ್ಡೇರ್, ಶಿವರಾಜ ಉಗಾದಿ, ರೇಣುಕಾರಾಧ್ಯ, ಭೂಮೇಶ್ವರ, ಹನುಮಂತಪ್ಪ ಇತರರಿದ್ದರು.