ಕಂಪ್ಲಿ ಕೆರೆಯಲ್ಲಿ ಕಾಣಿಸಿಕೊಂಡಿದ್ದ ಮೊಸಳೆ ಮೀನುಗಾರರ ಬಲೆಗೆ

Kampli Lake Crocodile
ಕಂಪ್ಲಿಯ ಸೋಮಪ್ಪ ಕೆರೆಯಲ್ಲಿ ಸೆರೆ ಸಿಕ್ಕ ಮೊಸಳೆ. ಅರಣ್ಯಪಾಲಕ ಬಿ.ರಾಘವೇಂದ್ರ, ಅರಣ್ಯ ವೀಕ್ಷಕ ಬಿ.ನಾಗಪ್ಪ, ಮೀನುಗಾರರಿದ್ದರು.
Published on

ಕಂಪ್ಲಿ: ಇಲ್ಲಿನ ಸೋಮಪ್ಪ ಕೆರೆಯಲ್ಲಿದ್ದ ಮೊಸಳೆಯನ್ನು ಕಂಪ್ಲಿ ಕೋಟೆ ತುಂಗಭದ್ರಾ ಸಹಕಾರ ಸಂಘದ ಮೀನುಗಾರರು ಬಲೆ ಹಾಕಿ ಶುಕ್ರವಾರ ಸೆರೆ ಹಿಡಿದರು. ಕೆಲದಿನದಿಂದ ಮೊಸಳೆ ಚಲನವಲನ ಗುರುತಿಸಿದ ಜನರು ಪುರಸಭೆ ಗಮನಕ್ಕೆ ತಂದಿದ್ದರು. ಅರಣ್ಯ ಇಲಾಖೆಗೆ ಪುರಸಭೆ ತಿಳಿಸಿತ್ತು. ಜೂ.24ರಿಂದ ಎರಡು ದಿನಗಳ ಅರಣ್ಯ ಇಲಾಖೆ ಪ್ರಯತ್ನಕ್ಕೆ ಫಲಸಿಗದೆ ಮೊಸಳೆ ತಪ್ಪಿಸಿಕೊಂಡಿತ್ತು.

ಶುಕ್ರವಾರ 25 ಬುಟ್ಟಿಗಳಲ್ಲಿ ಮೀನುಗಾರರು ಕೆರೆಗೆ ಇಳಿದು, ಕೆರೆಪೂರ್ಣ ಮೊಸಳೆ ಸೆರೆಗೆ ಬಲೆ ಹಾಕಿದ್ದರು. ಬೆಳಗ್ಗೆ 8.45 ಹೊತ್ತಿಗೆ ಮೊಸಳೆ ಸೆರೆ ಸಿಕ್ಕಿದೆ. ಮೊಸಳೆಯ ಬಾಯಿ ಕಟ್ಟಿ, ಅರಣ್ಯ ಇಲಾಖೆ ಸಿಬ್ಬಂದಿ ಕೋಣೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು. ಮೊಸಳೆ ನೋಡಲು ಜನಜಂಗುಳಿ ಸೇರಿತ್ತು.

ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್‌ಗೆ ಮೊಸಳೆಯನ್ನು ಸುರಕ್ಷಿತವಾಗಿ ಒಯ್ದು, ಅಲ್ಲಿನ ಪಶು ವೈದ್ಯರಿಂದ ಆರೋಗ್ಯ ಪರೀಕ್ಷಿಸಿದ ನಂತರ ಅದನ್ನು ಎಲ್ಲಿ ಬಿಡುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೊಸಪೇಟೆ ಪ್ರಾದೇಶಿಕ ಅರಣ್ಯ ವಲಯದ ಗಸ್ತು ಅರಣ್ಯಪಾಲಕ ಬಿ.ರಾಘವೇಂದ್ರ ತಿಳಿಸಿದರು.

ಸೋಮಪ್ಪ ಕೆರೆಯಲ್ಲಿ ಇನ್ನೊಂದು ಚಿಕ್ಕ ಮೊಸಳೆ ಇರುವುದಾಗಿ ಜನ ತಿಳಿಸಿದ್ದಾರೆ. ಅದನ್ನು ಸಹ ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಕೆರೆ ವೀಕ್ಷಣೆಗೆ ಬರುವವರು, ವಾಯುವಿಹಾರಿಗಳು ಎಚ್ಚರಿಕೆಯಿಂದ ಇರಬೇಕೆಂದು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net